ಕುಂಟಾಲಪಲ್ಕೆ: 12ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ, ವರ್ಗಾವಣೆಗೊಂಡ ಶಿಕ್ಷಕ ಸುರೇಶ್ ಎಂ ಅವರಿಗೆ ಸನ್ಮಾನ

0

ಬಂದಾರು: ಸರಸ್ವತಿ ಭಜನಾ ಮಂಡಳಿ ಕುಂಟಾಲಪಲ್ಕೆ, ಸರಸ್ವತಿ ಹಳೆ ವಿದ್ಯಾರ್ಥಿ ಸಂಘ ಮತ್ತು ಪ್ರಗತಿ ಬಂಧು ಒಕ್ಕೂಟ ಕುಂಟಾಲಪಲ್ಕೆ‌ ಮತ್ತು ಶೈಕ್ಷಣಿಕ ಸಮಿತಿ ಸ.ಹಿ.ಪ್ರಾ.ಶಾಲೆ
ಕುಂಟಾಲಪಲ್ಕೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 12ನೇ ವರ್ಷದ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಸೆ.17ರಂದು ನೆರವೇರಿತು.

ಈ ಸಂದರ್ಭ ಕುಂಟಾಲಪಲ್ಕೆ ಶಾಲೆಯಲ್ಲಿ 16ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಸುರೇಶ್ ಎಂ ಅವರನ್ನು ಸನ್ಮಾನಿಸಲಾಯಿತು.ಸನ್ಮಾನಗೊಂಡ ಸುರೇಶ್ ಎಂ.ಅವರು ಅಷ್ಟಮಿ ಆಚರಣೆಯ ಜೊತೆಗೆ ಶಾಲಾಭಿವೃದ್ಧಿ ಕೆಲಸವನ್ನು ಊರವರು ಸೇರಿ ಎಲ್ಲರೂ ಒಗ್ಗಟ್ಟಾಗಿ ಮಾಡಿದಾಗ ಅರ್ಥಪೂರ್ಣವಾಗುವುದು ಎಂದು ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಶ್ರೀಧರ ಗೌಡ ಎರ್ಮಡೇಲು ಉದ್ಘಾಟಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಕೃಷ್ಣ ಗೌಡ ಪಿಲ್ಕೊ, ಎಸ್.ಡಿ.ಎಂ.ಸಿ.ಸದಸ್ಯರಾದ ಶ್ರೀನಿವಾಸ ಗೌಡ ಕುಂಟಾಲಪಲ್ಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಗೌಡ ಕಲ್ಲಿಮಾರು, ಭಜನಾ ಮಂಡಳಿ ಅಧ್ಯಕ್ಷ ಪ್ರವೀಣ್ ಗೌಡ ಎರ್ಮಡೇಲು, ಬಂದಾರು ಗ್ರಾ.ಪಂ.ಸದಸ್ಯ ಮೋಹನ ಗೌಡ ಕೊಡ್ಯೇಲು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಗಾಯತ್ರಿ.ಕೆ ಪ್ರಸ್ತಾವನೆಗೈದು ಸ್ವಾಗತಿಸಿದರು.

ಗೌರವ ಶಿಕ್ಷಕಿ ಗಣ್ಯಶ್ರೀ ವಿಜೇತರ ಪಟ್ಟಿಯನ್ನು, ಅತಿಥಿ ಶಿಕ್ಷಕಿ ಯಶೋಧಾ ಸನ್ಮಾನ ಪತ್ರ ವಾಚಿಸಿದರು.

ಊರಿನವರು, ಶಾಲಾ ಪೋಷಕರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಹಳೆ ವಿದ್ಯಾರ್ಥಿ ದೀಪ್ತಿ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಚೇತನಾ ವಂದಿಸಿದರು.

p>

LEAVE A REPLY

Please enter your comment!
Please enter your name here