ಬೆಳ್ತಂಗಡಿ: 13 ವರ್ಷದ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಗುರುನಾರಾಯಣ ಸಭಾ ಭವನದಲ್ಲಿ ಸೆ.18ರಂದು ನಡೆಯಿತು.
ಸಭಾ ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ ಉದ್ಘಾಟಿಸಿ ಮಾತನಾಡಿ ಸಮಾಜದ ದುಷ್ಟ ಶಕ್ತಿಯನ್ನು ನಾಶ ಮಾಡಲು ಜಾತಿ ಮತ ಭೇದ ಮರೆತು ಗೌರಿ ಗಣೇಶ ಹಬ್ಬದ ಆಚರಣೆ ಮಾಡಬೇಕಾಗಿದೆ.ಎಲ್ಲರೂ ಒಂದಾಗಿ ಸಂಘಟಿತರಾಗಿ ಗಣೇಶ ಹಬ್ಬ ಆಚರಿಸಿದಾಗ ಒಳ್ಳೆಯದಾಗುತ್ತದೆ ಎಂದರು.
ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಶಿಕ್ಷಕಿ ಮನೋರಮಾ ತೋಳ್ಪಾಡಿತ್ತಾಯ ಪ್ರಧಾನ ಭಾಷಣಕಾರರಾಗಿ ಮಾತನಾಡಿ ಶ್ರೀಗಣೇಶೋತ್ಸವ ಆಚರಣೆಯ ಮಹತ್ವವನ್ನು ವಿವರಿಸಿದರು.
13ನೇ ವರ್ಷದ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಸುಕುಮಾರ್ ಜೈನ್, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾದ ರಾಮಕೃಷ್ಣ ಭಟ್ ಚೊಕ್ಕಾಡಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್, ಮುಂಡೂರು ಶಾಲಾ ಮುಖ್ಯ ಶಿಕ್ಷಕ ಕಲ್ಲೇಶ್, ಪೊಲೀಸ್ ಇಲಾಖೆಯಲ್ಲಿ ಚಿನ್ನದ ಪದಕ ಪಡೆದ ವಿಜಯ್ ಕುಮಾರ್, ಧರ್ಮಸ್ಥಳ ಮೇಳದ ವ್ಯವಸ್ಥಾಪಕ ಗಿರೀಶ್ ಹೆಗ್ಡೆ, ಹಿರಿಯ ಯಕ್ಷಗಾಣ ಕಲಾವಿದ ನಾರಾಯಣ ಗೌಡ ಕೊಳ್ತಿಗೆ, ಮತ್ತು ಯಕ್ಷಗಾನ ಕಲಾವಿದ ನಂದ ಕುಮಾರ್, ಹವ್ಯಾಸಿ ಕಲಾವಿದ ವೆಂಕಣ್ಣ ಕೊಯ್ಯೂರು, ಮೆಸ್ಕಾಂ ನಿವೃತ್ತ ಅಧಿಕಾರಿ ಆನಂದ ದೇವಾಡಿಗ, ಸಮಾಜ ಸೇವೆಯಲ್ಲಿ ಶೇಷ ಗಿರಿ ಶೆಣೈ, ನಾಟಿ ವೈದ್ಯೆಯರಾದ ಸೇಸಮ್ಮ, ದೇಜಮ್ಮ, ಧರ್ಮಸ್ಥಳ ಸ್ವಚ್ಛತಾ ಸೇನಾನಿ ನಾಗಪ್ಪ ಮತ್ತು ಹೊನ್ನಮ್ಮ, ದೈವ್ಯ ನರ್ತಕ ದೇವು ಪರವ, ಜನಾರ್ದನ ನಲ್ಕೆ, ಬಾಬು ನಲ್ಕೆ, ಕ್ರೀಡೆಯಲ್ಲಿ ಸಾಧನೆ ಮಾಡಿದ ಕುಮಾರಿ ಅಂಜಲಿ ಮುಂಡಾಜೆ, ಇಂಧುಮತಿ ತಲ್ವಾರ್ ಮುಂಡಾಜೆ, ಶೈಕ್ಷಣಿಕ ಸಾಧನೆಗೆ ಪೆರ್ಲ ಬೈಪಾಡಿ ಶಾಲಾ ಸುರಕ್ಷಿತ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸುವುದು ಶ್ರೇಷ್ಠ ಕಾರ್ಯ ಎಂದು ಶುಭ ಹಾರೈಸಿದರು.
ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೇಶವ ಬೆಳಾಲು ಸ್ವಾಗತಿಸಿದರು.ಮೋಹನ್ ಶೆಟ್ಟಿಗಾರ್ ಧನ್ಯವಾದವಿತ್ತರು.ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.