ಅನುಗ್ರಹ ಶಾಲೆಯಲ್ಲಿ ‘ಕಲರ‍್ಸ್ ಡೇ’ 2023-24

0

ಉಜಿರೆ: ಅನುಗ್ರಹ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಹಾಗೂ ಒಂದನೇ ತರಗತಿಯ ಪುಟಾಣಿಗಳಿಗೆ ‘ಕಲರ‍್ಸ್ ಡೇ( ಬಣ್ಣಗಳ ದಿನ) ಯನ್ನು ವಿನೂತನ ರೀತಿಯಲ್ಲಿ ವೈಭವದಿಂದ ಆಚರಿಸಲಾಯಿತು. ಶಾಲೆಯ ಹೆಮ್ಮಯ ಬ್ಯಾಂಡ್ ವಾದನದೊಂದಿಗೆ ಪುಟಾಣಿಗಳನ್ನು ಅವರ ಹೆತ್ತವರೊಂದಿಗೆ ಅನುಗ್ರಹ ಶಾಲಾ ಮಹಾದ್ವಾರದಿಂದ ಸಭಾಭವನಕ್ಕೆ ಶಿಸ್ತಿನಿಂದ ಕರೆತರಲಾಯಿತು.

ತದನಂತರ ಪುಟಾಣಿ ಮಕ್ಕಳ ಪ್ರಾರ್ಥನಾ ನೃತ್ಯದೊಂದಿಗೆ ಸಭಾಕಾರ್ಯವನ್ನು ಪ್ರಾರಂಭಿಸಲಾಯಿತು. ಪುಟಾಣಿ ವಿದ್ಯಾರ್ಥಿಗಳು ಗಣ್ಯರನ್ನು ಸ್ವಾಗತಿಸಿದರು. ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಟ್ರೆಸ್ಸಿ ಡೈನಾ ಪಿಂಟೋರವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲಕ ಪೋಷಕರ ಮಹತ್ವವನ್ನು ತಿಳಿಸುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ! ವಿಜಯ್ ಲೋಬೋರವರು ಪೋಷಕರ ಹಾಗೂ ಶಿಕ್ಷಕಿಯರ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಕಲರ‍್ಸ್ ಡೇಯ ಮಹತ್ವವನ್ನು ತಿಳಿಸಿದರು.ವೇದಿಕೆಯಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಅಂಟನಿ ಫೆರ್ನಾಂಡೀಸ್, ಸದಸ್ಯರಾದ ಶಿನು, ಶಿಕ್ಷಕ ರಕ್ಷಕ ಸಂಘದ ಸದಸ್ಯೆ ಶ್ರೀಮತಿ ಬೇಬಿಯವರು ಉಪಸ್ಥಿತರಿದ್ದರು. ಕುಮಾರಿ ಕಾಶ್ಮಿ ಕಾರ್ಯಕ್ರಮ ನಿರೂಪಿಸಿದಳು.
ತದನಂತರ ಪುಟಾಣಿ ಮಕ್ಕಳಿಂದ ನಡೆದ ವೈವಿಧ್ಯಮಯ ಬಣ್ಣಗಳ ವಸ್ತ್ರಾಲಂಕಾರದಿಂದ ಕೂಡಿದ ನೃತ್ಯವು ಎಲ್ಲರ ಮನರಂಜಿಸಿತು.ಈ ಆಕರ್ಷಕ ಕರ‍್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ಹಂಚಲಾಯಿತು.

LEAVE A REPLY

Please enter your comment!
Please enter your name here