ಬೆಳ್ತಂಗಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ- ಮಾದಕ ವಸ್ತುಗಳಿಗೆ ಪ್ರೇರಣೆ ನೀಡುವ ವ್ಯಕ್ತಿ ಈ ದೇಶದ ದುಷ್ಕರ್ಮಿ: ವಿವೇಕ್ ವಿನ್ಸೆಂಟ್ ಪಾಯ್ಸ್

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಜನಜಾಗೃತಿ ಯೋಜನೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಮಾದಕ ವಸ್ತು ಜಾಗೃತಿ ಮೂಡಿಸುವ ಕಾರ್ಯಕ್ರಮವು ಸೆ.9ರಂದು ಶ್ರೀ ಮಂಜುನಾಥ ಸ್ವಾಮಿ ಕಲಾಭವನ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿ ವಿವೇಕ್ ವಿನ್ಸೆಂಟ್ ಪಾಯ್ಸ್ ಇವರು ಮಾತನಾಡಿ ಕುಡಿತದ ಚಟದಿಂದ ದಿಕ್ಕು ಇಲ್ಲದಂತೆ ಸಾವಿಗೆ ಕಾರಣವಾಗುತ್ತದೆ ಮಾದಕ ವಸ್ತುವು ಶುದ್ಧ ಬಟ್ಟೆಯಲ್ಲಿ ಕಪ್ಪು ಚುಕ್ಕೆ ಇದ್ದಹಾಗೆ.

ಮಾದಕ ವಸ್ತುಗಳ ಬಗ್ಗೆ ಚಟ ಬೇಡ ಚಿಕ್ಕ ವಯಸ್ಸಿನಲ್ಲಿ ಧೂಮಪಾನ ಮಾಡುವುದು ನಂತರ ಮಧ್ಯಪಾನ ಮಾಡುವುದನ್ನು ಕಲಿಯುತ್ತಾರೆ.ಮಾದಕ ವಸ್ತುಗಳಿಗೆ ಪ್ರೇರಣೆ ನೀಡುವ ವ್ಯಕ್ತಿ ಈ ದೇಶದ ದುಷ್ಕರ್ಮಿ ಯಾವ ಧರ್ಮದಲ್ಲಿಯೂ ಯಾವ ಜಾತಿಯಲ್ಲಿಯೂ ಮಧ್ಯಪಾನ ಮಾಡಬೇಕು ಹೇಳಲಿಲ್ಲ ಮಾದಕ ವಸ್ತುವನ್ನು ಸೇವಿಸುವುದರಿಂದ ನಿಮ್ಮ ಕುಟುಂಬ ಸಂಸಾರ ನಾಶವಾಗುತ್ತದೆ.ಆತ್ಮಹತ್ಯೆ ಅಕಾಲಿಕ ಮರಣ ಅಪಘಾತ ಈ ಮೂರು ಮಧ್ಯಪಾನ ಮಾಡಿದವರಿಗೆ ಕಟ್ಟಿಟ್ಟ ಬುತ್ತಿ ಎಂದರು.

ನಂತರ ಮಾತನಾಡಿದ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ಸುಕುಮಾರ ಜೈನ್ ಗಾಂಜಾ ಮತ್ತು ಮಾದಕ ವಸ್ತುಗಳ ಬಗ್ಗೆ ಜಾಹೀರಾತು ನೀಡುವುದು, ಸಿನಿಮಾ ನಟ ನಟಿಯರನ್ನು ನೋಡಿ ಮಾರುಹೋಗಬೇಡಿ, ಜಾಗೃತರಾಗಿರಿ ಎಂದು ತಿಳಿಸಿ ಪ್ರತಿಜ್ಞೆ ನಿಧಿಯನ್ನು ಬೋಧಿಸಿದರು.ವೇದಿಕೆಯಲ್ಲಿ ಹಿರಿಯ ಉಪನ್ಯಾಸಕ ಆನಂದ್ ಡಿ ಇವರ ಉಪಸ್ಥಿತಿ ಇದ್ದರು.ಕಾರ್ಯಕ್ರಮವನ್ನು ಹೇಮಾವತಿ ಇವರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here