ತಾಲೂಕು ಮಟ್ಟದ ಕರಾಟೆ ಚಾಂಪಿಯನ್ಶಿಪ್- ಸರಕಾರಿ ಪ್ರೌಢಶಾಲೆ ಕೊಯ್ಯೂರಿನ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕರಾಟೆ ಪಂದ್ಯಾಟವನ್ನು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಂಗಾಡಿಯಲ್ಲಿ ದಿನಾಂಕ ಸೆಪ್ಟೆಂಬರ್ 1ರಂದು ಆಯೋಜಿಸಲಾಗಿತ್ತು.

ಇದರಲ್ಲಿ ಸರಕಾರಿ ಪ್ರೌಢಶಾಲೆ ಕೊಯ್ಯೂರಿನ 8ನೇ ತರಗತಿ ವಿದ್ಯಾರ್ಥಿಯಾದ ಕೌಶಿಕ್ ಕೆ ಇವರು 14ರ ವಯೋಮಾನದ ಕೆಳಗಿನ 20-25ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಹಾಗೆಯೇ 17ರ ವಯೋಮಾನದ ಕೆಳಗಿನ 35-40ಕೆಜಿ ವಿಭಾಗದಲ್ಲಿ ಲಿಖಿತ್ ಬಜಿಲ ಇವರು ದ್ವಿತೀಯ ಸ್ಥಾನವನ್ನು ಮತ್ತು ಅನ್ವಿತ್ ಎನ್ ಇವರು 30-35ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಇವರಿಗೆ ಸೆನ್ಸಾಯ್ ಮೋಹನ್ ಬಜೆ ಇವರು ತರಬೇತಿಯನ್ನು ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here