ಬೆಳ್ತಂಗಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಬೆಳ್ತಂಗಡಿ ನೇತೃತ್ವದಲ್ಲಿ ರಾಷ್ಟ್ರೀಯ ಪೌಷ್ಟಿಕಾಹಾರ ಸಪ್ತಾಹ ಕಾರ್ಯಕ್ರಮ ಸೆ.2 ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರುಗಿತು.
ಬೆಳ್ತಂಗಡಿ ಸರಕಾರಿ ಆಭಿಯೋಜಕ ನ್ಯಾಯವಾದಿ ಆರ್.ಸುಭಾಷಿಣಿ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು.
ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಪ್ರೀಯಾ ಆಗ್ನೇಸ್ ಚಾಕೊ ವೇದಿಕೆಯಲ್ಲಿ ಪಪ್ಪಾಯಿ ಹಣ್ಣು ಕತ್ತರಿಸುವ ಮೂಲಕ ಪೌಷ್ಟಿಕಾಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ವಿಧ್ಯ ಕುಮಾರ್, ತಾಲೂಕು ಪಂಚಾಯತ್ ವ್ಯವಸ್ಥಾಪಕ ಪ್ರಶಾಂತ್ ಕುಮಾರ್, ನ್ಯಾಯವಾದಿ ಮಮ್ತಾಜ್ ಬೇಗಂ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ನಿಶಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾ ಹಾರೈಸಿದರು.
ಜಿಲ್ಲಾ ಮಟ್ಟದ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪಡೆದ ನಾಗವೇಣಿ ಕೆ.ಎಸ್ ಮತ್ತು ಜನಾರ್ದನ ಪೂಜಾರಿ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿದರು.
ಹಿರಿಯ ಮೇಲ್ವಚಾರಕಿ ಉಜಿರೆ ವಲಯ ರತ್ನಾವತಿ ಸ್ವಾಗತಿಸಿದರು.ಕಣಿಯೂರು ವಲಯ ಮೇಲ್ವಿಚಾರಕಿ ನಂದನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಇಂದಬೆಟ್ಟು ವಲಯ ಮೇಲ್ವಿಚಾರಕಿ ನಾಗವೇಣಿ ಧನ್ಯವಾದವಿತ್ತರು.