

ಬೆಳ್ತಂಗಡಿ: ಆ.29ರಂದು ಸೋಜಾ ಸಂಸ್ಥೆಗೆ ಭೇಟಿ ನೀಡಿದಂತಹ ತುಳು ಚಲನಚಿತ್ರ ರಂಗದ ಖ್ಯಾತ ನಟ ಚೇತನ್ ರೈ ಹಾಗೂ ಕರಾವಳಿ ಸುದ್ದಿ ವಾರಪತ್ರಿಕೆ ಮುದ್ರಿತ, ಪ್ರಕಟಿತ ಮತ್ತು ಮಾಲೀಕತ್ವರಾಗಿರುವಂತಹ ರೋಶನ್ ಬೋನಿಫೇಸ್ ಮಾರ್ಟಿಸ್ ರವರು ಭೇಟಿ ನೀಡಿದ್ದರು.ಹಾಗೂ ಇವರಿಗೆ ಸೋಜಾ ಸಂಸ್ಥೆಯ ಸಿಬ್ಬಂದಿಯಾದ ರಮೇಶ್ ರವರು ರೋಶನ್ ಬೋನಿಸ್ ಮಾರ್ಟೀಸ್ ರವರಿಗೆ ಹಾರ ನೀಡಿ ಗೌರವಿಸಿದರು. ಹಾಗೆಯೇ ಚೇತನ್ ರೈ ರವರಿಗೆ ಸಂಸ್ಥೆಯ ಸಿಬ್ಬಂದಿಯಾದ ಪ್ರಕೃತಿ.ಕೆ ರವರು ಹಾರ ನೀಡಿ ಗೌರವಿಸಿದರು.ನಂತರ ಚೇತನ್ ರೈ ಹಾಗೂ ರೋಶನ್ ಬೋನಿಸ್ ರವರಿಗೆ ಸಂಸ್ಥೆಯ ಪಾಲುದಾರಾದ ಅಲ್ಫೋನ್ಸೋ ಫ್ರಾಂಕೊ ರವರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಸೇರಿ ಸ್ಮರಿಣಿಕೆ ನೀಡಿ ಗೌರವಿಸಿ, ಅಂತರಾಳದಲ್ಲಿ ನೆನಪಿಡುವಂತೆ ಈ ಕ್ಷಣಕ್ಕೆ ಎಲ್ಲರೂ ಸಾಕ್ಷಿಯಾದರು.