ಬೆಳ್ತಂಗಡಿ: ಪವಿತ್ರ ಉಮ್ರಾ ನಿರ್ವಹಣೆಗಾಗಿ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಬುರಾಕ್ ಇಂಟರ್ನ್ಯಾಷನಲ್ ಟ್ರಾವೆಲ್ಸ್ ಮೂಲಕ ಸೌದಿ ಅರೇಬಿಯಾ ಕ್ಕೆ ಪ್ರಯಾಣಬೆಳೆಸಿದ್ದ ಉಳ್ಳಾಲ ತಾಲೂಕಿನ ಮದನಿ ನಗರ ನಿವಾಸಿ ಝುಬೈದ ಎಂಬವರು ಅಸೌಖ್ಯದಿಂದ ಆ. 17 ರಂದು ಪವಿತ್ರ ಮಕ್ಕಾದಲ್ಲಿ ಇಹಲೋಕ ತ್ಯಜಿಸಿದರು.
ಕುಟುಂಬದ ಇಚ್ಛೆಯಂತೆ ಮೃತರ ದಫನ ಕಾರ್ಯ ಮಕ್ಕಾದಲ್ಲೇ ನಿರ್ವಹಿಸುವುದಾಗಿ ತೀರ್ಮಾನಿಸಿ, ಉಮ್ರಾ ಗ್ರೂಪ್ ಲೀಡರ್ ಅಬ್ದುಲ್ ಅಝೀಝ್ ಝುಹ್‌ರಿ ಕಿಲ್ಲೂರು ರವರ ನೇತೃತ್ವದಲ್ಲಿ ಮಕ್ಕಾದಲ್ಲಿ ದಫನ ಮಾಡಲು ಬೇಕಾದ ಎಲ್ಲಾ ದಾಖಲೆ ಪತ್ರಗಳ ತಯಾರಿಗಾಗಿ ಸಮಾಜ ಸೇವಕ ಶಾಕಿರ್ ಹಕ್ ನೆಲ್ಯಾಡಿ ಯವರ ಮೂಲಕ ಕ್ಲಪ್ತ ಸಮಯಕ್ಕೆ ಸಂಗ್ರಹಿಸಲಾಯಿತು.
ನಂತರ ಭಾರತದ ಕಾನ್ಸುಲೇಟ್ ನಿಂದ NOC ದೊರಕಿದ ನಂತರ ಮೃತರ ದಫನ ಕಾರ್ಯವನ್ನು ಮಕ್ಕಾದ ಹರಮ್ ಪರಿಸರದಲ್ಲಿ ನೆರವೇರಿಸಲಾಯಿತು. ದಾಖಲೆ ಪತ್ರಗಳ ಸಂಗ್ರಹಕ್ಕಾಗಿ ಶಾಕಿರ್ ಹಕ್ ರವರಿಗೆ ಮಂಗಳೂರು ಇಂಟರ್ ನ್ಯಾಷನಲ್ ಉಮ್ರಾ ಟ್ರಾವೆಲ್ಸ್ ನ ಮಾಲಕ ಹಾಜಿ ಅಬೂಬಕ್ಕರ್ ಅಡ್ಡೂರು ಹಾಗೂ ಹೆಚ್‌ಐಎಫ್ ನಾಯರಾದ ರಿಜ್ವಾನ್ ಪಾಂಡೇಶ್ವರ ನೆರವಾದರು.
ನಂತರ ನಡೆದ ದಫನ ಪ್ರಕ್ರಿಯೆ ಯಲ್ಲಿ ಕೆ ಸಿ ಎಫ್ ನಾಯಕ ಮೂಸ ಹಾಜಿ ಕಿನ್ಯ , ರಝಕ್ ಮುಸ್ಲಿಯಾರ್ ರಂತಡ್ಕ, ಲತೀಫ್ ನೆಲ್ಯಾಡಿ, ಹುಸೈನ್ ನೆಲ್ಯಾಡಿ, ಇಕ್ಬಾಲ್ ಕಕ್ಕಿಂಜೆ, ಹನೀಫ್ ಕೋಳಿಯೂರ್, ಶಾಕಿರ್ ಹಕ್ ನೆಲ್ಯಾಡಿ, ರನೀಝ್ ಗೇರುಕಟ್ಟೆ ಮೃತರ ಪತಿ ಇಸ್ಮಾಯಿಲ್ ಮತ್ತು ಮಕ್ಕಳು ಉಪಸ್ಥಿತರಿದ್ದರು.