ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಆವರಣದಲ್ಲಿ ಎನ್.ಸಿ.ಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಅಲೆಕ್ಸ್ ಐವನ್ ಸಿಕ್ವೇರಾ ರವರು ಧ್ವಜಾರೋಹಣವನ್ನು ನಡೆಸಿ “ದೇಶದ ಭದ್ರತೆ ಹಾಗೂ ಅಖಂಡತೆಯನ್ನು ಎತ್ತಿ ಹಿಡಿಯಬೇಕು” ಎಂದು ಸಂದೇಶವನ್ನು ನೀಡಿದರು.ಸ್ವಾತಂತ್ರ್ಯ ದಿನದ ಪಥಸಂಚಲನದಲ್ಲಿ ಕಾಲೇಜಿನ ಎನ್.ಸಿ.ಸಿ ಘಟಕವು ಪಾಲ್ಗೊಂಡಿತ್ತು.SUO ಮಾಕ್ಸಿಮ್ ಪಿರೇರಾರವರ ನೇತೃತ್ವದಲ್ಲಿ ಈ ಪಥಸಂಚಲನವು ನಡೆಯಿತು.

ಈ ಸಮಾರಂಭದಲ್ಲಿ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಅಲ್ವಿನ್ ಕೆ.ಜಿ., ರಾಷ್ಟ್ರಿಯ ಸೇವಾ ಯೋಜನಾಧಕಾರಿಗಳಾದ ಪ್ರಶಾಂತ್ ಎಮ್., ಕಾಲೇಜಿನ ಅಧ್ಯಾಪಕ, ಅಧ್ಯಾಪಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಧನಲಕ್ಷ್ಮೀ ನಿರೂಪಿಸಿದರು.

LEAVE A REPLY

Please enter your comment!
Please enter your name here