ಉಜಿರೆ: 77 ನೇ ಸ್ವಾತಂತ್ರೋತ್ಸವದ ಶುಭ ಸಂದರ್ಭದಲ್ಲಿ ಉಜಿರೆಯ ಬೆನಕ ಹೆಲ್ತ್ ಸೆಂಟರ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಕೊಯ್ಯೂರು ಗ್ರಾಮದ ಸುಂದರ ಮತ್ತು ನಾಗವೇಣಿ ದಂಪತಿಗಳ ಜನಿಸುವಾಗಲೇ ಅಂಗವಿಕಲತೆಯಿಂದ ನಡೆದಾಡಲು ಸಾಧ್ಯವಾಗದ ಬಾಲಕ ಸಿದ್ದಾರ್ಥ ಇವನಿಗೆ ತಜ್ಞ ವೈದ್ಯರ ಸಲಹೆಯಂತೆ ಗಾಲಿ ಖುರ್ಚಿ (Wheel Chair) ಆಸ್ಪತ್ರೆಯ ಆವರಣದಲ್ಲಿ ಉಚಿತ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ, ಡಾ.ಭಾರತಿ, ಡಾ.ಅಂಕಿತ ಜಿ ಭಟ್ ಹಾಗೂ ಬೆಳ್ತಂಗಡಿ ರೋಟರಿ ಅಧ್ಯಕ್ಷರಾದ ರೋ.ಅನಂತ ಭಟ್ ಮಚ್ಚಿಮಲೆ, ಕಾರ್ಯದರ್ಶಿ ರೋ,ವಿದ್ಯಾ ಕಾಂಚೋಡು ಹಾಗೂ ರೋಟರಿ ಬಂಧುಗಳು ಮತ್ತು ಬೆನಕ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
p>