ಮಚ್ಚಿನ: ಹಲವು ವರ್ಷಗಳಿಂದ ದಪನಕ್ಕೆ ಸರಿಯಾದ ವ್ಯವಸ್ಥೆಗಳು ಹಾಗೂ ಕಟ್ಟಡಗಳು ಇಲ್ಲದೆ ಅಲ್ಲಲ್ಲಿ ಭೂಮಿಯಲ್ಲಿ ಸುಡಲಾಗುತ್ತಿತ್ತು ಮಳೆಗಾಲದಲ್ಲಂತೂ ಸಾರ್ವಜನಿಕರು ಪಡುತ್ತಿದ್ದ ಕಷ್ಟ ಎಷ್ಟು ಇದನ್ನೆಲ್ಲ ಮನಗಂಡು ಗ್ರಾಮ ಪಂಚಾಯತ್ ನೂತನ ಸಮಿತಿಯನ್ನು ಆರಿಸಿಕೊಂಡು ಗ್ರಾಮ ಪಂಚಾಯಿತಿಯಿಂದ, ಸಾರ್ವಜನಿಕರ, ಸಂಘ ಸಂಸ್ಥೆಗಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಮತ್ತು ಇನ್ನಿತರರ ಸಹಕಾರಗಳೊಂದಿಗೆ ಒಂದು ಸುಂದರವಾದ ಕಟ್ಟಡ, ಧಪನ ಪೆಟ್ಟಿಗೆ, ನೀರಿನ ವ್ಯವಸ್ಥೆಯೊಂದಿಗೆ ರುದ್ರಭೂಮಿಯು ಸಜ್ಜುಗೊಂಡಿದೆ.
ಇದೇ ಬರುವ ಆ.9ರಂದು ಉದ್ಘಾಟನೆಗೊಳ್ಳಲಿದೆ.ಈ ರುದ್ರಭೂಮಿಯ ವಿಶ್ರಾಂತಿಕೊಠಡಿ ಮತ್ತು ಸುತ್ತು ಇಂಟರ್ಲಾಕ್ ಇನ್ನು ಹಲವಾರು ಕೆಲಸಗಳು ಬಾಕಿ ಇದ್ದು, ಸಾರ್ವಜನಿಕರ ಸಹಕಾರ ನೀಡುವಂತೆ ಸಮಿತಿಯ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಜೆ ಹಾಗೂ ಸರ್ವಸದಸ್ಯರು ತಮ್ಮೆಲ್ಲರ ಸಹಕಾರ ಬಯಸುವಂತಾಗಿದೆ.
p>