ಕಕ್ಯಪದವು ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಆಟಿಡೊಂಜಿ ದಿನ

0

ಬಂಟ್ವಾಳ ತಾಲೂಕು ಉಳಿ ಗ್ರಾಮದ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿ ಆ.5ರಂದು ಆಟಿಡೊಂಜಿ ದಿನವನ್ನು ಆಯೋಜಿಸಿ “ಆಟಿದಪೊರ್ಲು” ಎಂಬ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷೆ ಬಬಿತಾ ರೋಹಿನಾಥ್, ಕಾರ್ಯದರ್ಶಿ ಶಿವಾನಿ ಆರ್ ನಾಥ್ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಚಂದ್ರಹಾಸ ಶೆಟ್ಟಿ, ಮುಖ್ಯೋಪಾಧ್ಯಾಯ ಪಂಚದುರ್ಗಾ ಪ್ರೌಢ ಶಾಲೆ ಕಕ್ಯಬೀಡು, ಹಮೀದ್, ಮುಖ್ಯೋಪಾಧ್ಯಾಯ ದ.ಕ.ಜಿ.ಪ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಯಬೀಡು, ಹರಿಶ್ಚಂದ್ರ ಪೂಜಾರಿ ಕೇರ್ಯ, ಉದ್ಯಮಿಗಳು, ಗುರುಪ್ರಕಾಶ್ ಕೊರಡಿಂಗೇರಿ, ಲೆಕ್ಕ ಪರಿಶೋಧಕರು ಉಳಿ ಸೇವಾ ಸಹಕಾರಿ ಬ್ಯಾಂಕ್ ಕಕ್ಯಪದವು, ಸನತ್ ಕುಮಾರ್ ಅಧ್ಯಕ್ಷರು, ಯುವಕ ಮಂಡಲ ಉಳಿ ಕಕ್ಯಪದವು, ಅಕ್ಬರ್ ಅಲಿ‌, ಸಹಶಿಕ್ಷಕರು ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಉಳಿಬೈಲು, ಪುರುಷೋತ್ತಮ ದೈಹಿಕ ಶಿಕ್ಷಕರು ಶ್ರೀ ಪಂಚದುರ್ಗಾ ಪ್ರೌಢ ಶಾಲೆ ಕಕ್ಯಬೀಡು ಇವರು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಹಾಗೂ ಪ್ರಾಥಮಿಕ ಹಾಗೂ ಪೌಢ ವಿಭಾಗದ ಮುಖ್ಯಶಿಕ್ಷಕಿ ಕು.ವಿಜಯಾ.ಕೆ ಉಪಸ್ಥಿತರಿದ್ದರು.ಪ್ರಾಥಮಿಕ ವಿಭಾಗದ ಸಹಶಿಕ್ಷಕರಾದ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಹಿಂದಿನ ಕಾಲದ ತುಳುವರ ಬದುಕಿನ ಅನಾವರಣದೊಂದಿಗೆ ತುಳುನಾಡಿನ ವಿಶೇಷ ಖಾದ್ಯಗಳನ್ನು ಹಾಗೂ ಹಳೆಯ ಕಾಲದ ವಸ್ತುಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

p>

LEAVE A REPLY

Please enter your comment!
Please enter your name here