ಉಜಿರೆ ರತ್ನಮಾನಸ ವಸತಿ ನಿಲಯದಲ್ಲಿ ಆಟಿದ ಗಮ್ಮತ್ತು

0

ಉಜಿರೆ: ರತ್ನಮಾನಸ ವಸತಿ ನಿಲಯ ಉಜಿರೆ ಹಾಗೂ ಶ್ರೀ ಧ.ಮ.ಶಿಕ್ಷಕರ ತರಬೇತಿ ಸಂಸ್ಥೆ (ಡಿ. ಎಡ್ )ಇವರ ಜಂಟಿ ಸಹ ಯೋಗದಲ್ಲಿ ಆ. 5ರಂದು ರತ್ನ ಮಾನಸ ವಸತಿ ನಿಲಯದಲ್ಲಿ ಆಟಿದ ಗಮ್ಮತ್ತು ಆಷಾಢ ಮಾಸದ ವಿಶೇಷ ಆಹಾರ ತಿನಿಸುಗಳ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಉಜಿರೆ ಶ್ರೀ ಧ. ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಭಾಗವಹಿಸಿ ಶುಭ ಹಾರೈಸಿದರು.ಶ್ರೀ ಧ.ಮ.ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಎ.ಜಯಕುಮಾರ್, ಉಪನ್ಯಾಸಕಿ ಶರೀಫ ಕುಮಾರಿ, ಶ್ರೀ ಧ.ಮ.ಶಿಕ್ಷಣ ಸಂಸ್ಥೆಗಳ ಕ್ಷೇಮಪಾಲನಾ ಅಧಿಕಾರಿ ಬಿ.ಸೋಮಶೇಖರ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿವಿಧ ಆಚರಣೆ ಮತ್ತು ಮಹತ್ವದ ಕುರಿತು ಮಾತಾಡಿದರು.

ಕಾರ್ಯಕ್ರದಲ್ಲಿ ಶ್ರೀ ಧ.ಮ.ಕಾಲೇಜು ಪ್ರಾಂಶುಪಾಲ ಡಾ.ಕುಮಾರ ಹೆಗ್ಡೆ, ಶ್ರೀ ಧ.ಮ.ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್, ಡಿ.ಎಡ್.ಕಾಲೇಜು ಪ್ರಾಂಶುಪಾಲ ಸ್ವಾಮಿ ಕೆ., ಉಪನ್ಯಾಸಕ ಮಂಜು, ರತ್ನ ಮಾನಸ ವಸತಿ ನಿಲಯದ ಮೇಲ್ವಿಚಾರಕ ಯತೀಶ್ ಕೆ.ಬಳಂಜ, ರವಿಚಂದ್ರ, ಸಿಬ್ಬಂದಿಗಳು, ಎಸ್.ಡಿ.ಎಂ. ಕಾಲೇಜು ಉಪನ್ಯಾಸಕರು ಸೆಕಂಡರಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು, ರತ್ನಮಾನಸ ಮತ್ತು ಡಿಎಡ್ ಕಾಲೇಜು ವಿದ್ಯಾರ್ಥಿಗಳು, ಹೆತ್ತವರು ಹಾಜರಿದ್ದರು.

ಬಳಿಕ ವಿವಿಧ ಖಾದ್ಯದ ಸಹ ಭೋಜನ ನಡೆಯಿತು.ಆಹಾರದ ವಿವಿಧ ಸಲಕರಣೆ ಒದಗಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಡಿಎಡ್ ಕಾಲೇಜಿನ ಅನುಷಾ ಸ್ವಾಗತಿಸಿ, ದಿವ್ಯ ವಂದಿಸಿದರು.ಅಂಬಿಕಾ ವಿವಿಧ ಖಾದ್ಯಗಳ ವಿವರ ನೀಡಿದರು.ಯತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here