ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸಿಎಂ ಸಿದ್ದರಾಮಯ್ಯರಿಗೆ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ರವರಿಗೆ ಮರು ತನಿಖೆಗೆ ಮನವಿ

0

ಬೆಳ್ತಂಗಡಿ: ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರವರಿಗೆ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಜು.31 ರಂದು ಬೆಂಗಳೂರಿನಲ್ಲಿ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್.ಪದ್ಮಗೌಡ, ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ಸವಣಾಲು, ಕಾರ್ಯದರ್ಶಿ ಗಣೇಶ್ ಗೌಡ ಕಡಿರುದ್ಯಾವರ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎನ್.ನಡ, ನಿರ್ದೇಶಕರಾದ ಧರ್ಣಪ್ಪ ಗೌಡ ಬಾನಡ್ಕ, ವಿಜಯ ಗೌಡ ನ್ಯಾಯತರ್ಪು, ಯುವರಾಜ್ ಅನಾರು, ಹರೀಶ್ ಗೌಡ ಪರಪ್ಪಾಜೆ, ರವೀಂದ್ರನಾಥ ಗೌಡ ಕೊಳ್ಳೂರು, ಸದಸ್ಯರಾದ ಮಾಧವ ಗೌಡ, ನಿತಿನ್ ಕಲ್ಮಂಜ, ತೀಕ್ಷಿತ್ ಮಲವಂತಿಗೆ ಜೊತೆಯಲ್ಲಿದ್ದರು.

p>

LEAVE A REPLY

Please enter your comment!
Please enter your name here