ಧರ್ಮಸ್ಥಳ: ಶ್ರೀ ಮಂ.ಅ.ಪ್ರೌಢಶಾಲೆಯಲ್ಲಿ ಕಲಾಕುಸುಮ ಸಂಗೀತ ಮತ್ತು ಯಕ್ಷಗಾನ ತರಗತಿಗಳ ಉದ್ಘಾಟನಾ ಕಾರ್ಯಕ್ರಮ

0

ಧರ್ಮಸ್ಥಳ: ಶ್ರೀ ಮಂ. ಅ. ಪ್ರೌಢಶಾಲೆ ಇಲ್ಲಿ ಸಂಗೀತ ಹಾಗೂ ಯಕ್ಷಗಾನ ತರಗತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಜು.12ರಂದು ನಡೆಸಲಾಯಿತು.

ಶಾಲಾ ಸಂಚಾಲಕರಾದ ಶ್ರೀ ಅನಂತ ಪದ್ಮನಾಭ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ಮತ್ತು ಕಲೆಯ ಕಲಿಕೆಯ ಔಚಿತ್ಯವನ್ನು ತಿಳಿಸಿದರು.

ಈ ಕಾರ್ಯಕ್ರಮದ ಅಭ್ಯಾಗತರಾದ ಹಾಗೂ ತರಬೇತುದಾರರಾದ ಲಕ್ಷ್ಮಣ ಗೌಡ (ಯಕ್ಷಗಾನ ತರಬೇತುದಾರರು) ಮತ್ತು ಶ್ರೀದೇವಿ ಸಚಿನ್ (ಸಂಗೀತ ತರಬೇತುದಾರರು) ಇವರು ಕಾರ್ಯಕ್ರಮದ ಮುಖ್ಯ ವಾಹಿನಿಯಲ್ಲಿ ಸಂಗೀತ ಮತ್ತು ಯಕ್ಷಗಾನದ ಮಹತ್ವ ತಿಳಿಸಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಲಲಿತಕಲೆಯ ಮಹತ್ವದ ಕುರಿತು ಶಿಕ್ಷಕರಾದ ಶ್ರೀ ಯುವರಾಜ್ ಮಾತನಾಡಿದರು.

ಶಾಲಾ ಮುಖ್ಯ ಶಿಕ್ಷಕ ಪದ್ಮರಾಜ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಶಿಕ್ಷಕಿ ಭವ್ಯಾ ಹೆಗಡೆ ನಿರೂಪಿಸಿ, ಶಿಕ್ಷಕ ಶಶಿಧರ್ ಸ್ವಾಗತಿಸಿ ಹಾಗೂ ಲಿಂಗಪ್ಪ ಗೌಡ ವಂದನಾರ್ಪಣೆಯನ್ನು ನಡೆಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರಗಿತು.

LEAVE A REPLY

Please enter your comment!
Please enter your name here