ಗಿಡ ಮರಗಳನ್ನು ಸಂರಕ್ಷಿಸುವುದು ವನಮಹೋತ್ಸವದ ನಿಜವಾದ ಆಚರಣೆ-ಪ್ರಶಾಂತ್.ಎ- ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮ

0

ನಾರಾವಿ: “ವನಮಹೋತ್ಸವ ಎಂದರೆ ಗಿಡಗಳನ್ನು ನೆಡುವುದು ಮಾತ್ರವಲ್ಲ, ನೆಟ್ಟ ಗಿಡಗಳನ್ನು ಸಂರಕ್ಷಿಸುವುದು ಅಷ್ಟೇ ಮುಖ್ಯ.ಇಂದಿನ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಜಾಗೃತಿ ಮೂಡಿಸುವುದು ಹಾಗೂ ಅವರಲ್ಲಿ ಗಿಡ ಮರಗಳ ಮೇಲೆ ಪ್ರೀತಿ ಮೂಡಿಸುವ ಕೆಲಸವಾಗಬೇಕು” ಎಂದು ಸ.ಹಿ.ಪ್ರಾ.ಶಾಲೆ- ಕೇಳದಪೇಟೆ ಕಾಶಿಪಟ್ಣ ಇಲ್ಲಿನ ಮುಖ್ಯ ಶಿಕ್ಷಕರಾದ ಶ್ರೀ ಪ್ರಶಾಂತ್ ಎ. ಅಭಿಪ್ರಾಯ ಪಟ್ಟರು.
ಅವರು ಸಂತ ಅಂತೋನಿ ಪದವಿ ಕಾಲೇಜು -ನಾರಾವಿ ಇಲ್ಲಿನ ಎನ್ ಎಸ್ ಎಸ್ ಘಟಕ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ವಂ.ಡಾ. ಆಲ್ವಿನ್ ಸೆರಾವೊ ”ವನಮಹೋತ್ಸವ ಒಂದು ದಿನದ ಆಚರಣೆಅಲ್ಲ, ಇಡೀ ವರ್ಷದಲ್ಲಿ ಆಚರಿಸುವ ಉತ್ಸವ.ಗಿಡ ಮರಗಳಿದ್ದರೆ ಮಾತ್ರ ನಾವು ಬದುಕಲು ಸಾಧ್ಯ” ಎಂದರು.
ರಾ.ಸೇ.ಯೋಜನಾಧಿಕಾರಿ ದಿನೇಶ್ ಬಿ.ಕೆ.ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.

ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ, ಎನ್.ಎಸ್.ಎಸ್ ಘಟಕದ ಕಾರ್ಯದರ್ಶಿಗಳಾದ ಕು.ನವ್ಯಶ್ರೀ, ಸುಹಾಸ್ ಹೆಗ್ಡೆ ಹಾಗೂ ವಿದ್ಯಾರ್ಥಿ ಪರಿಷತ್ತಿನ ನಾಯಕಿ ಕು.ತೇಜಸ್ವಿನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here