ಉಜಿರೆ ಗ್ರಾಮ ಪಂಚಯತ್ ವ್ಯಾಪ್ತಿಗೊಳಪಟ್ಟ ಸುಪ್ರೀಮ್ ಲಾಡ್ಜ್ ಎದುರು ಜು.07ರಂದು ಅಪರಿಚಿತ ವ್ಯಕ್ತಿ ಅಸ್ವಸ್ಥಗೊಂಡು ಬಿದ್ದಿದ್ದು, ಅವರನ್ನು ಚಿಕಿತ್ಸೆ ಗೆ ಅಂಬ್ಯುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಜು.08.ರಂದು ಮೃತಪಟ್ಟಿರುತ್ತಾರೆ.
ಮೃತರ ವಾರೀಸುದಾರರ ಪತ್ತೆಯ ಬಗ್ಗೆ ಪ್ರಯತ್ನಿಸಿದ್ದು, ಮೃತರು ಯಾರೆಂಬುದಾಗಿ ಪತ್ತೆಯಾಗಿರುವುದಿಲ್ಲ.
ಮೃತರು ಯಾವುದೋ ಊರಿನಿಂದ ಕೆಲಸಕ್ಕಾಗಿ ಅಥವಾ ಭಿಕ್ಷಾಟಣೆಗಾಗಿ ಬಂದು ಉಜಿರೆ ಪರಿಸರದಲ್ಲಿದ್ದವರು. ಅವರು ಯಾವುದೋ ಖಾಯಿಲೆಯಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿ ಮೃತರ ಮೃತದೇಹದ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕಾಗಿ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ.ವಾರಸುದಾರರ ಪತ್ತೆ ಬಗ್ಗೆ ಸಹಕರಿಸಲು ವಿನಂತಿ.
p>