ಕಲ್ಲೇರಿ: ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ಜೂ.24 ರಂದು ಚುನಾವಣೆ ನಿಗದಿಯಾಗಿದ್ದು ಒಟ್ಟು ಎಲ್ಲಾ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೂ.28 ರಂದು ಆಡಳಿತ ಮಂಡಳಿಯ ಸಭೆಯಲ್ಲಿ ಅಧ್ಯಕ್ಷರಾಗಿ ಬಿ. ನಿರಂಜನ್ ಮತ್ತು ಉಪಾಧ್ಯಕ್ಷರಾಗಿ ಪಿ. ಜಯರಾಜ್ ಹೆಗ್ಡೆ ಆಯ್ಕೆಯಾದರು.
ನಿರ್ದೇಶಕರು ಸಾಮಾನ್ಯ 7 ಸ್ಥಾನಕ್ಕೆ ಬಿ. ನಿರಂಜನ್, ಪಿ. ಜಯರಾಜ್ ಹೆಗ್ಡೆ, ಜಾನ್ ಫೆಲಿಕ್ಸ್ ಲೋಬೊ, ಯಾನ್. ಪ್ರಸನ್ನ, ಜನಾರ್ಧನ ಗೌಡ, ವಜ್ರ ಕುಮಾರ್, ಕೃಷ್ಣಪ್ಪ ಪೂಜಾರಿ,ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ. ಶೂರ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಚೋಮ ನಾಯ್ಕ, ಹಿಂದಿಳಿದ ವರ್ಗ ಎ. ವರ್ಗದಿಂದ ತಿಮ್ಮಪ್ಪ ಸಾಲಿಯಾನ್,, ಹಿಂದುಳಿದ ವರ್ಗ ಬಿ. ವರ್ಗದಿಂದ ಪಿ. ದಿನೇಶ್ ಗೌಡ, 2 ಸ್ಥಾನ ಮಹಿಳಾ ಮೀಸಲು ಕ್ಷೇತ್ರದಿಂದ ಹಾಜಿರಾ,ಕೆ. ಪುಷ್ಪ ಇವರು ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸುಳ್ಯ ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ನಿರ್ವಹಿದರು.ಕಾರ್ಯದರ್ಶಿ ಜಯರಾಜ್ ಜೈನ್
ಮತ್ತು ಸಿಬ್ಬಂದಿಗಳು ಸಹಕರಿಸಿದರು
ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ನಿರಂಜನ್ , ಉಪಾಧ್ಯಕ್ಷರಾಗಿ ಪಿ.ಜಯರಾಜ್ ಹೆಗ್ಡೆ ಆಯ್ಕೆ
p>