ಬೆಳ್ತಂಗಡಿ: ಇಲ್ಲಿಯ ಮುಖ್ಯ ರಸ್ತೆಯ ಶೃಂಗಾರ ಜ್ಯುವೆಲ್ಲರ್ಸ್ ಪಕ್ಕದ ಕಾಮತ್ ಸ್ಟೋರ್ ಮಾಲೀಕರಾದ ಮೂಲತಃ ನ್ಯಾಯತರ್ಪು ಗ್ರಾಮದ ನಾಳ ಸಮೀಪದ ಬೆಳ್ತಂಗಡಿ ಗೋಪಾಲಕೃಷ್ಣ ಕಾಮತ್ (92 ವರ್ಷ) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಜೂ.17 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಕಸ್ತೂರಿ ಕಾಮತ್, ಓರ್ವ ಪುತ್ರ ಸೋಮನಾಥ ಕಾಮತ್, ಮೂವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
p>