ಕಲ್ಮಂಜ: ಹೊಸಮನೆ ಕಡಂಬು ಗ್ರಾಮ ದೈವ ಕೊಡಮಣಿತ್ತಾಯ, ಮೈಸಂದಾಯ ಹಾಗೂ ಅಗ್ನಿಗುಳಿಗ ದೈವಗಳ ಜೀರ್ಣೋದ್ಧಾರ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕಡಂಬು ಹೊಸಮನೆ ಎಂಬಲ್ಲಿನ ಪ್ರಕೃತಿ ರಮಣೀಯವಾದ ರಮ್ಯಮನೋಹರವೂ, ಗುಡ್ಡ ತಪ್ಪಲು ಬಯಲು ಪ್ರದೇಶದ ಸುಂದರ ಸತ್ಯ ಸ್ಥಳದಲ್ಲಿ ಹಲವು 700 ಶತಮಾನಗಳ ಹಿಂದೆ ಗಾಂಜಾಲು ಎಂಬಲ್ಲಿ ಬ್ರಾಹ್ಮಣ ಶ್ರೇಷ್ಟರಿಂದ ಆರಾಧನೆಗೊಂಡ ರಕ್ತೇಶ್ವರಿ ಸಾನಿಧ್ಯ ಹಾಗೂ ಕಲ್ಮಂಜ ಎಂಬಲ್ಲಿ ಬಲ್ಲಾಳ ವಂಶದಿಂದ ಆರಾಧಿಸಲ್ಪಟ್ಟ ಪಿಲಿಚಾಮುಂಡಿ ದೈವ ಶಕ್ತಿಯೂ ಹೊಸಮನೆ ಎಂಬ ಆರೂಢ ಸ್ಥಳದಲ್ಲಿ ಪೂರ್ವ ರಾಜವಂಶಜರ ಕಾಲದಲ್ಲಿ ಆರಾಧನೆಯಾದಂತಹ ಕೊಡಮಣಿತ್ತಾಯಿ, ಮಹಿಷಂದಾಯ, ಅಗ್ನಿ ಗುಳಿಗ ಎಂಬ ರೀತಿಯಲ್ಲಿ ಮೂರು ಸ್ಥಳಗಳಲ್ಲಿ ಗ್ರಾಮ ದೈವಗಳಾಗಿ ನೆಲೆನಿಂತು ಕಲ್ಮಂಜ ಗ್ರಾಮದ ಸಕಲ ಭಕ್ತ ಜನರ ಇಷ್ಟಾರ್ಥ ಸಿದ್ಧಿಯ ದೈವಗಳೆಂದು ಪ್ರಸಿದ್ಧಿ ಪಡೆದಿತ್ತು.ವರ್ತಮಾನ ಕಾಲಘಟ್ಟದಲ್ಲಿ ಹೊಸಮನೆ ಕಡಂಬು ಎಂಬ ಸ್ಥಳದಲ್ಲಿ ನೆಲೆನಿಂತ ದೈವಶಕ್ತಿಗಳು ಪೂರ್ವದಲ್ಲಿ ಆರಾಧನೆಯ ಲೋಪದೋಷಗಳಲ್ಲಿ ವೈಪರೀತ್ಯ ಸೃಷ್ಟಿಯಾಗಿ ಆಚರಣೆಗಳು ಸ್ಥಗಿತವಾಗಿ ಸಂಪೂರ್ಣ ನಾಮಾವಶೇಷವಾಗಿರುವುದು ಗ್ರಾಮದ ಭಕ್ತ ಬಾಂಧವರಿಗಾಗಿ ಹಲವು ತರಹದ ದೋಷ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. ಇದರ ಸತ್ಯಾವಸ್ಥೆಯನ್ನು ತಿಳಿಯಲು ಬೇಕಾಗಿ ಪ್ರಸಿದ್ಧ ದೈವಜ್ಞರಾದ ಜ್ಯೋತಿಷ್ಯ ತಿಲಕಂ ಶ್ರೀ ಶಶಿಧರ ಮಾಂಗಾಡ್‌ರವರ ನೇತೃತ್ವದಲ್ಲಿ ಅಷ್ಟಮಂಗಲ ಸ್ವರ್ಣ ಪ್ರಶ್ನಾಚಿಂತನೆ ಮಾಡಿದಾಗ ಮೇಲೆ ತಿಳಿಸಿದ ವಿಚಾರ ಧಾರೆಗಳು ಬೆಳಕಿಗೆ ಬಂತು.

ಆದುದರಿಂದ ಗ್ರಾಮದ ಎಲ್ಲರ 4 ಕ್ಷೇಮಾಭಿವೃದ್ಧಿಗಾಗಿಯೂ, ದೈವಶಕ್ತಿಗಳ ಅನುಗ್ರಹ ಪ್ರಸಾದಕ್ಕಾಗಿಯೂ ಕೊಡಮಣಿತ್ತಾಯಿ, ಮಹಿಷಂದಾಯ ದೈವಗಳಿಗೆ ಗುಡಿಯನ್ನು, ಅಗ್ನಿಗುಳಿಗನಿಗೆ ಕಟ್ಟೆಯನ್ನು ವಿಧಿಪ್ರಕಾರ ನಿರ್ಮಿಸಿ, ಬೇಕಾದ ರೀತಿಯಲ್ಲಿ ಆದಾಧನೆ ಮಾಡಿಕೊಂಡು ಬಂದರೆ ಕ್ಷೇಮ ಎಂದು ಕಂಡುಬಂದ ಪ್ರಕಾರ ಗ್ರಾಮಸ್ಥರನ್ನು ಸೇರಿಸಿಕೊಂಡು ಸದೃಢವಾದ ಜೀರ್ಣೋದ್ಧಾರ ಸಮಿತಿ ರಚಿಸಿ ಇದರ ನೇತೃತ್ವದಲ್ಲಿ ತಂತ್ರಿವರ್ಯರಾದ ಶ್ರೀ ಬ್ರಹ್ಮ ವೇದಮೂರ್ತಿ ರಮಣ ತಂತ್ರಿವರ್ಯರು ಉಡುಪಿ ಮತ್ತು ಪುರೋಹಿತರು ಗಣೇಶ ಬಾರಿತ್ತಾಯ ಬೆಳಾಲು ಇವರ ನೇತೃತ್ವದಲ್ಲಿ ದಿನಾಂಕ ಜೂ.8ರಂದು 11 ಗಂಟೆ ಸರಿಯಾಗಿ ಶುಭಮುಹೂರ್ತದಲ್ಲಿ ಖನನಾದಿ ಸಪ್ತಶುದ್ಧಿ ಭೂ ಪರಿಗ್ರಹ ಪೂಜೆಯನ್ನು ಮಾಡಿ ಅನುಷ್ಠಾಕಲಶ, ಬಾಲಾಲಯ ಪ್ರತಿಷ್ಠೆಯನ್ನು ಮಾಡಿಕೊಂಡು, ನಂತರ ಪ್ರಖ್ಯಾತ ವಾಸ್ತುಶಿಲ್ಲಿಯವರಾದ ಶ್ರೀ ರಮೇಶ ಕಾರಂತ ಬೆರಡ್ಕ ಕಾಸರಗೋಡು (ಮಿತ್ತಬಾಗಿಲು ಕೊಲ್ಲಿ ೨ ದುರ್ಗಾ ದೇವಸ್ಥಾನದ ವಾಸ್ತುಶಿಲ್ಪಿ) ಇವರ ನಿರ್ದೇಶನ ಪ್ರಕಾರ ರೂಪರೇಷೆಗಳನ್ನು ಸಿದ್ಧಪಡಿಸಿ ದೈವಗಳ ಜೀರ್ಣೋದ್ದಾರ ಕಾರ್ಯಗಳನ್ನು ಮಾಡಿಕೊಂಡು ಪ್ರತಿಷ್ಠಾ ಕಾರ್ಯದ ಬೃಹತ್‌ ಯೋಜನೆಗಳು ನಡೆಯಲಿದೆ ಎಂದು ಆಡಳಿತ ಮಂಡಳಿಯ ಸರ್ವ ಸದಸ್ಯರು ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here