ಮರೋಡಿ: ಇಲ್ಲಿಯ ಪೊಸರಡ್ಕ ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ದೈವ, ಶ್ರೀ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೂತನವಾಗಿ ನಿರ್ಮಾಣಗೊಳ್ಳಲ್ಲಿರುವ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವು ಕೇಳಬೊಟ್ಟ ಅನಂತ ಅಸ್ರಣ್ಣರ ಪೌರೋಹಿತ್ಯದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಜೂ. 1 ರಂದು ಶಿಲಾನ್ಯಾಸವನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ಮೂಡಬಿದ್ರೆ ಚೌಟರ ಅರಮನೆ ಕುಲದೀಪ ಯಂ, ಪೆರಿಂಜೆ ಪಡ್ಯಾರಬೆಟ್ಟು ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಜೀವಂಧರ್ ಕುಮಾರ್, ಮೂಡಬಿದ್ರೆ ಧನಲಕ್ಷ್ಮೀ ಕ್ಯಾಶ್ಯೂಸ್ ಮಾಲಕ ಶ್ರೀಪತಿ ಭಟ್ ಮೂಡಬಿದ್ರೆ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವಾರಂ, ನ್ಯಾಯವಾದಿ ಪದ್ಮರಾಜ್ ಆರ್ ಮಂಗಳೂರು, ವೇಣೂರು ದಿಗಂಬರ ಜೈನ್ ತೀರ್ಥ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ , ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಗಡಿ ಪ್ರಧಾನರಾದ ಬಗ್ಗ ಪೂಜಾರಿ ಕೇಂಜ ಕುತ್ಯಾರು, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಮುಖರಾದ ಸತೀಶ್ ಕಾಶಿಪಟ್ನ, ರವೀಂದ್ರ ಪೂಜಾರಿ ಬಾಂದೊಟ್ಡು, ವಿಶು ಕುಮಸರ್ ಜೈನ್, ಶೀತಲ್ ಜೈನ್ ಶಿರ್ಲಾಲು, ನಾರಾಯಣ ಪೂಜಾರಿ ಉಚ್ಚೂರು, ಬಾಲಕೃಷ್ಣ ಪೂಜಾರಿ, ಆಡಳಿತ ಸಮಿತಿಯ ಅಧ್ಯಕ್ಷ ಜಯವರ್ಮ ಬುಣ್ಣು, ಗೌರವಾಧ್ಯಕ್ಷರುಗಳಾದ ಜಿನೇಂದ್ರ ಬಲ್ಲಾಳ್, ಕೆ ಹೇಮರಾಜ್ ಬೆಳ್ಳಿಬೀಡು, ಕಾರ್ಯದರ್ಶಿ ಆದಿತ್ಯ ಎ. ಕೆ, ಆಡಳಿತ ಸಮಿತಿ ಸದಸ್ಯರಾದ ರವೀಂದ್ರ ನಾಪ, ಗೋಪು ಪೂಜಾರಿ ಉಚ್ಚೂರು, ರಮೇಶ್ ಪೂಜಾರಿ ಬಲಂತ್ಯರೊಟ್ಟು, ಜಿನೇಂದ್ರ ಜೈನ್ ಕುಕ್ಕೇರಬೆಟ್ಟು, ಸುದರ್ಶನ ಜೈನ್ ಪಾಂಡಿಬೆಟ್ಡುಗುತ್ತು ಹಾಗೂ ಆಡಳಿತ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.