ನೆಲ್ಯಾಡಿ: ದಕ್ಷಿಣ ಕರ್ನಾಟಕದ ಭರಣಂಗಾನಮ್ ಎಂಬ ಹೆಸರಿನ ಸಂತ ಅಲ್ಫೋನನ್ಸ ದೇವಾಲಯ ನೆಲ್ಯಾಡಿಯಲ್ಲಿ ಭಕ್ತಿ ಪೂರ್ವಕವಾಗಿ ನೂರಾರು ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ಹೊಸ ಯೋಚನೆಗಳೊಂದಿಗೆ ಹೊಸ ಅಧ್ಯಯನ ವರ್ಷಕ್ಕೆ ಕಾಲಿಟ್ಟರು.
ಕ್ರೈಸ್ತ ಆಚಾರದಂತೆ ಯೇಸು ಕ್ರಿಸ್ತರ ಪುನಃರುತ್ತಾನದ ಐವತ್ತನೇ ದಿನ ನಡೆಯುವ ಪಂಚಾಶತ್ತಮ ಹಬ್ಬದಂದು ಹೊಸದಾಗಿ ಶಾಲೆಗೆ ಸೇರ್ಪಡೆಯಾಗುವ ಮಕ್ಕಳು ಧರ್ಮಗುರುಗಳಲ್ಲಿ ವಿದ್ಯಾರಂಭ ಮಾಡಿಸುತ್ತಾರೆ.ಇದರಂತೆ ಇಂದು ಸಂತ ಅಲ್ಫೋನ್ಸ ದೇವಾಲಯದಲ್ಲಿ ವಿದ್ಯಾರಂಭಕ್ಕೆ ಧರ್ಮಗುರುಗಳು ಹಾಗೂ ಕೆ ಎಸ್ ಎಂ ಸಿ ಎ ನಿರ್ದೇಶಕರು ಆಗಿರುವ ವಂದನಿಯ ಶಾಜಿ ಮಾತ್ಯು ನೇತೃತ್ವ ವನ್ನು ನೀಡಿದರು.
ಮಕ್ಕಳಲ್ಲಿ ಶ್ರದ್ದೆ, ಭಕ್ತಿ ಮತ್ತು ವಿನಯ ಮೈಗೂಡಿಸಿಕೊಂಡಾಗ ವಿದ್ಯೆಯು ತನ್ನಷ್ಟಕ್ಕೆ ಜೊತೆಗೂಡುವ ಅನುಭವವಾಗುತ್ತದೆ ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಚರ್ಚಿನ ಟ್ರಷ್ಟಿಗಳಾದ ಶ್ರೀ ಬೇಬಿ, ಶ್ರೀ ಸಜಿ ಜೇಮ್ಸ್ ಬಿಜು, ಸಂಡೆ ಸ್ಕೂಲ್ ಮುಖ್ಯ್ಯೊಪಾಧ್ಯಾಯರಾದ ಶ್ರೀ ರೊಯ್ ಭಗೀನಿಯಿರಾದ ವಂದನಿಯ ಆಲ್ಪಿ,, ಹಾಗೂ ಆಲೀಸ್ ಉಪಸ್ಥಿತರಿದ್ದರು.