ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರ್ ಇಲ್ಲಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಪ್ರೊ. ಶ್ರೀನಾಥ್ ಬಿ.ಎಸ್ ರವರ ನೇತೃತ್ವದಲ್ಲಿ 48 ವಿದ್ಯಾರ್ಥಿಗಳೊಂದಿಗೆ ಏಕದಿನ ಶೈಕ್ಷಣಿಕ ಪ್ರವಾಸವನ್ನು ದಿನಾಂಕ ಮೇ.26ರಂದು ಕೈಗೊಳ್ಳಲಾಗಿತ್ತು.ಪ್ರವಾಸಕ್ಕೆ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಹೊರಟು ಸಂಜೆ 4.30 ಗಂಟೆಗೆ ಹಿಂದಿರುಗಲಾಯಿತು.
ಆರಂಭದಲ್ಲಿ ‘ಬೆಳ್ತಂಗಡಿ ತಾಲೂಕು ಪಂಚಾಯತ್’ಗೆ ಭೇಟಿ ನೀಡಲಾಯಿತು. ಕಾರ್ಯಾಗಾರದಲ್ಲಿ ಬೆಳ್ತಂಗಡಿ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀ.ಕುಸುಮಾರ್ ಮಾತನಾಡಿ ಗ್ರಾಮ ಪಂಚಾಯತಿಯ ಸದಸ್ಯರ ಆಯ್ಕೆ, ಅದರ ಅಧಿಕಾರ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಶ್ರೀ.ಸುರೇಶ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅಲ್ಲಿಂದ ಹೊರಟು ಬೆಳ್ತಂಗಡಿಯ ‘ಶ್ರೀ ಧರ್ಮಸ್ಥಳ ಸಿರಿ ಉದ್ಯೋಗಾಭಿವೃದ್ಧಿ ಸಂಸ್ಥೆ’ಗೆ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿಯನ್ನು ವೀಕ್ಷಿಸಲಾಯಿತು.
ತದನಂತರ ಧರ್ಮಸ್ಥಳದ ಪ್ರತಿಷ್ಠಿತ ‘ರುಡ್ ಸೆಟ್ ಸಂಸ್ಥೆ’ಗೆ ಭೇಟಿ ನೀಡಿ, ಅಲ್ಲಿನ ಅಧಿಕಾರಿ ಜೇಮ್ಸ್ ಅಬ್ರಹಾಂ ಸ್ವ ಉದ್ಯೋಗ ತರಬೇತಿಯ ಕುರಿತಾದ ಮಾಹಿತಿಯನ್ನು ನೀಡಿದರು.
ಮಧ್ಯಾಹ್ನದ ಭೋಜನದ ನಂತರ ಧರ್ಮಸ್ಥಳದ ಪ್ರತಿಷ್ಠಿತ ಶ್ರೀ.ಮಂಜುನಾಥೇಶ್ವರ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲಾಯಿತು.ಅಂತಿಮವಾಗಿ ‘ಶಿಶಿಲ ದೇವಾಲಯ’ಕ್ಕೆ ಭೇಟಿ ನೀಡಿ, ಸಂಜೆ ಹಿಂದಿರುಗಲಾಯಿತು.
ಈ ಪ್ರವಾಸದಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕರಾದ ಪ್ರೊ.ನೋರ್ಬೆರ್ಟ್ ಡಿ’ಸೋಜಾ, ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸೀಮಾ ಉಪಸ್ಥಿತರಿದ್ದರು.