ಉಜಿರೆ ಶ್ರೀ ಧ.ಮಂ.ಕಾಲೇಜಿನಲ್ಲಿ ವಿಶ್ವ ದೂರಸಂಪರ್ಕ ದಿನ: ವಿಶೇಷ ಉಪನ್ಯಾಸ

0

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ವತಿಯಿಂದ ‘ವಿಶ್ವ ದೂರಸಂಪರ್ಕ ದಿನ’ (World Telecommunicaton Day) ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಮೇ.25ರಂದು ನಡೆಯಿತು.

ಕಾಲೇಜಿನ ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಶೈಲೇಶ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.ದೂರ ಸಂಪರ್ಕ ಸೌಲಭ್ಯದಿಂದಾಗಿ ವಿಶ್ವದ ಗಾತ್ರ ಸಣ್ಣದಾಗಿದೆ.ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಕ್ಷಣ ವಿಶ್ವದಾದ್ಯಂತ ಪಸರಿಸುವ ಶಕ್ತಿ ಅದಕ್ಕಿದೆ ಎಂದು ಅವರು ಹೇಳಿದರು.“ಆದರೆ ಮಾನವ ಇಂದು ದೂರಸಂಪರ್ಕ ಸಾಧನಗಳ ದಾಸನಾಗಿದ್ದಾನೆ. ಈ ಸಾಧನಗಳ ಬಳಕೆ ಮಿತವಾಗಿರುವುದು ಅಗತ್ಯ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎನ್. ಕಾಕತ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗುರುತ್ವ-2K23 ಫೆಸ್ಟ್ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.

ಅಸ್ಮಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

p>

LEAVE A REPLY

Please enter your comment!
Please enter your name here