







ಬೆಳ್ತಂಗಡಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ 20ರಂದು ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ (ಮೂರು ಮಾರ್ಗದ ಬಳಿ) ಕಾರ್ಯಕ್ರಮದ ನೇರ ಪ್ರಸಾರ ಎಲ್‌ಇಡಿ ಪರದೆಯಲ್ಲಿ ಬಿತ್ತರವಾಗಲಿದೆ.
ಕಾರ್ಯಕರ್ತರು ಮತ್ತು ನಾಯಕರು ಭಾಗವಹಿಸಬೇಕಾಗಿ ಬ್ಲಾಕ್ ಅಧ್ಯಕ್ಷರಾದ ಶೈಲೇಶ್ ಕುಮಾರ್ ಮತ್ತು ರಂಜನ್ ಜಿ. ಗೌಡ ವಿನಂತಿಸಿದ್ದಾರೆ.








