ದಿಡುಪೆ: ಮಲವಂತಿಗೆ ಗ್ರಾಮದ ನೇತ್ರಕೊಂಡಗೆ ಎಂಬಲ್ಲಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಚುನಾವಣಾ ಪ್ರಚಾರ ಮಾಡಿದರು.ಹಾಗೂ ನೇತ್ರಕೊಡಂಗೆ ಕಿಂಡಿ ಅಣೆಕಟ್ಟು ವೀಕ್ಷಣೆ ಮಾಡಿ, ಬಳಿಕ ನಿರುಪಯುಕ್ತ ಕಾಮಗಾರಿ ಎಂದು ಮಾಧ್ಯಮದೊಂದಿಗೆ ಆಸಮಾದಾನ ವ್ಯಕ್ತ ಪಡಿಸಿದರು.
ಮಲವಂತಿಗೆ 50 ಜನರು ವಾಸಿಸುವ ಪ್ರದೇಶಕ್ಕೆ ಕಿಂಡಿ ಅಣೆಕಟ್ಟು ನಿರ್ಮಿಸದೆ 2 ಮನೆಗೆ ಹೊಗುವ ದಾರಿಗೆ ಮಾತ್ರ ಸೀಮಿತವಾದ ಕಿಂಡಿ ಅಣೆಕಟ್ಟು ಸೇತುವೆ ನಿರ್ಮಿಸಿ, ಕಾಂಗ್ರೆಸ್ಸಿಗರನ್ನು ಧಮಾನ ಮಾಡುವ ಕೆಲಸವನ್ನು ಬಿಜೆಪಿ ಶಾಸಕರು ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ.
ಸ್ಥಳೀಯ ನಿವಾಸಿ ನಾರಾಯಣ ಗೌಡರವರು ಅಣೆಕಟ್ಟು ನಿರ್ಮಿಸಿದರೆ ರಸ್ತೆ ನಿರ್ಮಾಣಕ್ಕೆ ಸ್ವಂತ ಜಾಗವನ್ನು ಉಚಿತವಾಗಿ ನೀಡುತ್ತೇನೆ ಎಂದರೂ ಒಪ್ಪಲಿಲ್ಲ.ಈ ರೀತಿ ಮಾಡುವ ಮೂಲಕ ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ ಜನರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.ಸರಕಾರದ ಬೊಕ್ಕಸಕ್ಕೆ ಸುಮಾರು 1½ ಕೋಟಿ ರೂಪಾಯಿ ಅನುದಾನ ನಷ್ಟ ಮಾಡಿದ್ದಾರೆ.ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗಿದೆ ಎಂದು ಗಂಭೀರವಾಗಿ ಆರೋಪಿಸಿ ಖಂಡಿಸಿದರು.
ಈ ಸಂದರ್ಭದಲ್ಲಿ ಇಂದಬೆಟ್ಟು ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಮುಖರಾದ ಲಕ್ಷ್ಮಣ ಗೌಡ ಬಂಗಾಡಿ, ತಾಲೂಕು ಪಂಚಾಯತು ಮಾಜಿ ಸದಸ್ಯ ಜಯರಾಮ, ದಿಡುಪೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಮ್.ಟಿ.ನಾರಾಯಣ ಗೌಡ, ಮಲವಂತಿಗೆ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಜಗದೀಶ್, ಕಾಂಗ್ರೆಸ್ ಸಂಯೋಜಕ ಚಂದ್ರಶೇಖರ, ಮಿತ್ತಬಾಗಿಲು ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್ ಪಯ್ಯೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.