ಬೆಳ್ತಂಗಡಿ: ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಡೆ ಮತದಾರ ಒಲವು ಜಾಸ್ತಿ ಇದ್ದು ರಕ್ಷಿತ್ ಶಿವರಾಂ ಗೆಲುವು ಖಚಿತ ಎಂದು ಕಾಂಗ್ರೆಸ್ ಅಲ್ಪ ಸಂಖ್ಯಾತ ತಾಲೂಕು ಘಟಕದ ನಗರ ಅಧ್ಯಕ್ಷ ಸಲೀಂ ಗುರುವಾಯನಕೆರೆ ಮತ್ತು ಗ್ರಾಮೀಣ ಅಧ್ಯಕ್ಷ ಆಶ್ರಫ್ ನೆರಿಯ ಹೇಳಿದರು.
ಅವರು ಎ.27 ರಂದು ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಕಾರ್ಯಕರ್ತರು ತಾಲೂಕಿನ 241 ಬೂತ್ ಗಳ ಮೂಲೆ ಮೂಲೆಗೆ ಭೇಟಿ ನೀಡಿ ನಾಲ್ಕು ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಗುತ್ತಿದೆ.ಗ್ಯಾರಂಟಿ ಕಾರ್ಡ್ ಬಗ್ಗೆ ಮತದಾರರಿಗೆ ವಿಶ್ವಾಸ ಹೆಚ್ಚಾಗಿ ನಮ್ಮ ಕಾರ್ಯಕರ್ತರ ಜೊತೆಗೆ ಮತದಾರರು ಪ್ರಚಾರಕ್ಕೆ ಸೇರಿ ಕೊಳ್ಳುತ್ತಿದ್ದಾರೆ.ಮೊನ್ನೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಿರೀಕ್ಷೆಗೆ ಮೀರಿ ಸೇರಿದ ಜನ ಸಾಗರವನ್ನು ಕಂಡು ಬಿಜೆಪಿ ಅಭ್ಯರ್ಥಿ ಶಾಸಕ ಹರೀಶ್ ಪೂಂಜ ಹತಾಶರಾಗಿದ್ದಾರೆ ಇದರಿಂದ ಅವರು ತುರ್ತು ಸಭೆ ಕರೆದು ವಿವಿಧ ಆಮಿಷಗಳ ಮೊರೆ ಹೋಗಿದ್ದಾರೆ. ಜೆ ಡಿ ಎಸ್ ಪಕ್ಷದ ಅಭ್ಯರ್ಥಿ ಆಶ್ರಫ್ ರವರಿಗೆ ದೊಡ್ಡ ಮೊತ್ತದ ಆಮಿಷ ನೀಡಿ ಸ್ಪರ್ಧಿಸುವಂತೆ ಮಾಡಿ ಅಲ್ಲ ಸಂಖ್ಯಾತರ ಮತ ವಿಭಜನೆಯಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರಿದರು,ಅಲ್ಲದೆ ಮುಸಲ್ಮಾನರ ಪವಿತ್ರ ಯಾತ್ರಾ ಸ್ಥಳಕ್ಕೆ ಚುನಾವಣೆಯ ಸಂದರ್ಭದಲ್ಲಿ ತೆರಳಲು ಶಾಸಕರು ವ್ಯವಸ್ಥೆ ಮಾಡಿಸುತ್ತಿದ್ದಾರೆ ಆದರೆ ಈ ಬಾರಿ ಯಾವ ಕುತಂತ್ರಕ್ಕೆ ಅಲ್ಪ ಸಂಖ್ಯಾತರು ಗಮನ ಕೊಡದೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ರಿಗೆ ಮತ ನೀಡಿ ಗೆಲ್ಲಿಸುತ್ತಾರೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಸೈನಿಕ ಮಹಮ್ಮದ್ ರಫಿ, ರಾಜ್ಯ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ. ಟಿ. ಸಭಾಸ್ಟಿನ್, ಚುನಾವಣಾ ವೀಕ್ಷಕ ಪ್ರಶಾಂತ್ ವೇಗಸ್, ಜಿಲ್ಲಾ ಸಮಿತಿ ಸದಸ್ಯೆ ಹಜೀರಾ ಉಪಸ್ಥಿತರಿದ್ದರು.