ಕೊಯ್ಯೂರು: ಅಗಲಿದ ಸ್ಥಳೀಯ ಯಕ್ಷಗಾನ ಹವ್ಯಾಸಿ ಹಿಮ್ಮೇಳ ಕಲಾವಿದರಿಗೆ ನುಡಿ ನಮನ ಮತ್ತು ಸಂಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ

0

ಕೊಯ್ಯೂರು: ಶ್ರೀ ಪಂಚದುರ್ಗಾ ಯಕ್ಷಗಾನ ಕಲಾ ಸಂಘ ಕೊಯ್ಯೂರು ಇದರ ನೇತೃತ್ವದಲ್ಲಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಕೊಯ್ಯೂರು ಇಲ್ಲಿ ಇತ್ತೀಚೆಗೆ ಅಗಲಿದ ಸ್ಥಳೀಯ ಯಕ್ಷಗಾನ ಹವ್ಯಾಸಿ ಹಿಮ್ಮೇಳ ವಾದಕರಾಗಿದ್ದ ದಿವಂಗತ ನರಸಿಂಹ ಮೂರ್ತಿ ಕುಂಟಿನಿ ಮತ್ತು ಹವ್ಯಾಸಿ ಭಾಗವತರಾಗಿದ್ದ ದಿ.ಸುರೇಶ್ ಪೈ ಗುರುವಾಯನಕೆರೆ ಇವರಿಗೆ ನುಡಿ ನಮನ ಸಲ್ಲಿಸಲಾಯಿತು.

ಕೊಯ್ಯೂರು ಪಂಚದುರ್ಗಾ ದೇವಳದ ಅರ್ಚಕರಾದ ಶ್ರೀ ಅಶೋಕ್ ಕುಮಾರ್ ಭಾಂಗಿಣ್ಣಾಯರು ದಿ.ನರಸಿಂಹಮೂರ್ತಿಯವರ ಒಡನಾಟ, ಸರಳತೆ, ಪರೋಪಕಾರಿ ಮನೋಭಾವ, ಯಕ್ಷಗಾನದ ಕುರಿತಾದ ಆಸಕ್ತಿಯ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು.

ಶಿಕ್ಷಕರಾದ ಶ್ರೀ ವಿಜಯಕುಮಾರ್‌ರವರು ಸುರೇಶ್ ಪೈಗಳಿಗೆ ನುಡಿನಮನ ಸಲ್ಲಿಸಿದರು.

ಎಸ್ ಡಿ ಎಮ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಶ್ರೀ ಸುಬ್ರಹ್ಮಣ್ಯ ಭಟ್ ಕಜೆಯವರು ಸುರೇಶ್ ಪೈಗಳು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಅವರ ಸಾಧನೆಗಳ ಗುಣಗಾನ ಮಾಡಿದರು.
ಅಗಲಿದ ಕಲಾವಿದರ ಸಂಸ್ಮರಣಾರ್ಥ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ರಾಮ ಪರಂಧಾಮ ಕಥೆಯ ತಾಳಮದ್ದಳೆ ಆಖ್ಯಾನ ನೆರವೇರಿತು.

ರಾಮಕೃಷ್ಣ ಭಟ್ ನಿನ್ನಿಕಲ್ಲು ಕಾರ್ಯಕ್ರಮ ನಿರೂಪಿಸಿ, ಬಾಸಮೆ ನಾರಾಯಣ ಭಟ್ ಸ್ವಾಗತಿಸಿ, ಸಂಘದ ಅಧ್ಯಕ್ಷರಾದ ಉಮೇಶ್ ಆಚಾರ್ಯ ವಂದಿಸಿದರು.

ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಕೊಯ್ಯೂರು ಅನಂತ ಭಟ್, ಶ್ರೀಮತಿ ಸುಮಂಗಲಾ, ಪದ್ಮನಾಭ ಕುಲಾಲ್, ಗುರುಮೂರ್ತಿ ಅಮ್ಮಣ್ಣಾಯ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here