ಬೆಳ್ತಂಗಡಿ: ಸ.ಪ್ರ.ದ.ಕಾಲೇಜು, ಬೆಳ್ತಂಗಡಿಯ 2022-23 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವು ದ.ಕ.ಜಿ. ಪಂ. ಉ.ಪ್ರಾ ಶಾಲೆ ಕುವೆಟ್ಟಿ ಬೆಳ್ತಂಗಡಿಯಲ್ಲಿ ಪ್ರೆಬವರಿ 10ರಿಂದ 16ರವರೆಗೆ ನಡೆಯಿತು.ಬೆಳಗ್ಗೆ ವ್ಯಾಯಾಮದಿಂದ ಹಿಡಿದು ಶ್ರಮದಾನ, ಶೈಕ್ಷಣಿಕ ಕಾರ್ಯಕ್ರಮ, ಸಾರ್ವಜನಿಕ ಅರಿವು ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಚಿಂತನಮಂಥನದೊಂದಿಗೆ ಕೊನೆಗೊಂಡಿತು.ಶ್ರಮದಾನದ ಮೂಲಕ 76 ಅಡಿಕೆ ಹೊಂಡ, ಇಂಗು ಗುಂಡಿ, ಕಳೆ ಕೀಳುವುದು, ಸಾರ್ವಜನಿಕ ರಸ್ತೆಯ ಇಕ್ಕೆಲಗಳ ಸ್ವಚ್ಛತೆ, ತೋಡಿನ ಹೂಳು ತೆಗೆಯುವುದು ಮುಂತಾದ ಕೆಲಸಗಳನ್ನು ಮಾಡಲಾಯಿತು.
ಸ್ಮಿತೇಶ್ ಬಾರ್ಯ ಇವರು “ಮನದ ಮಾತು”, ಡಾ. ಆಂಟಿನಿ ಟಿ.ಪಿ ”ಪೋಷಕರು ಮತ್ತು ವಿದ್ಯಾರ್ಥಿಗಳು”, ಶ್ರೀ ಚಂದ್ರಹಾಸ ಬಳಂಜ “ಸಂವಹನ ಕೌಶಲ್ಯ”, ಶ್ರೀ ಅಬ್ರಹಾಂ ಜೇವಾಲ್ಸ್ ಇವರು ಸ್ವ ಉದ್ಯೋಗ, ಮನೋಜ್ ಆಂಬ್ರೋಜ್ ತಂಡ ಕಟ್ಟುವುದು, ಶ್ರೀ ಜಯರಾಂ ಪೂಜಾರಿ ಆರೋಗ್ಯ ಪೂರ್ಣ ಜೀವನ ಪದ್ಧತಿ, ಬೆಳ್ತಂಗಡಿ ಯಶವಂತ್ ರಂಗ ತರಬೇತಿ, ಶ್ರೀ ನಾಗೇಶ್.ಎಂ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಜನರ ಸಹಬಾಗಿತ್ವ, ಡಾ.ಮರಿ ಎಂ.ಜೆ ಯೌವ್ವನ ಜೋಪಾನ, ಶ್ರೀ ಮುಕುಂದರಾಜ್ ಸಾಹಿತ್ಯ, ಸಂಗೀತ, ಸಂದೇಶ ಎಂಬ ವಿಚಾರಗಳ ಬಗ್ಗೆ ಶೈಕ್ಷಣಿಕ ಹಾಗೂ ಸಾರ್ವಜನಿಕ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿರಾಜ್ ಚಿಲಿಂಬಿ ಶಿಬಿರಾರ್ಥಿಗಳ ಶಿಸ್ತುಬದ್ಧ ನಡತೆಯನ್ನು ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ.ಕೆ ಶಿಬಿರಾರ್ಥಿಗಳ ಶ್ರಮವನ್ನು ಕೊಂಡಾಡಿದರು.ವೇದಿಕೆಯಲ್ಲಿ ಎನ್.ಎಸ್.ಎಸ್. ಫಟಕ ನಾಯಕ ನಾಯಕಿಯರಾದ ಸುಹಾಸ್ ಕಾರ್ತಿಕ್ ಹಾಗೂ ಲಕ್ಷ್ಮಿ ಉಪಸ್ಥಿತರಿದ್ದರು.ಜೀವಿತಾ ಮತ್ತು ತಂಡದವರು ಪ್ರಾರ್ಥಿಸಿ, ವಿನುತ ಸ್ವಾಗತಿಸಿ, ದೀಕ್ಷಾ ವಂದಿಸಿದರು.ವೃದ್ಧಿ ನಿರೂಪಿಸಿದರು.