ಬೆಳ್ತಂಗಡಿ: ಅದಪತನದಲ್ಲಿರುವ ಕಾಂಗ್ರೆಸ್ ದೇಶದಲ್ಲಿಯೇ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕೆಎಂಎಫ್ ನಂದಿನಿ ಮತ್ತು ಅಮುಲ್ ವಿವಾದ ಹುಟ್ಟು ಹಾಕಿದೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.ಅವರು ಎ.11ರಂದು ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಒಡೆದು ಅಳುವ ನೀತಿಯಲ್ಲಿ ಕಾಂಗ್ರೆಸ್ ನಡೆದುಕೊಂಡು ಬರುತ್ತಿರುವುದರಿಂದ ಅಧಿಕಾರ ವಿದ್ದ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದೆ. ನಂದಿನಿ ಮತ್ತು ಅಮುಲ್ ವಿವಾದ ಸೃಷ್ಟಿಸಿ ಗೊಂದಲ ಮಾಡುತ್ತಿದೆ.ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತರ, ಮಹಿಳೆಯರ ಹಿತಾಶಕ್ತಿಗೆ ಶ್ರಮಿಸಿ ಪ್ರಗತಿಯತ್ತ ಮುನ್ನಡೆಯುತ್ತಿದೆ.ನಂದಿನಿ 2018-19 ನೇ ಸಾಲಿನಲ್ಲಿ 14,500 ಕೋಟಿ ವ್ಯವಹಾರ ಮಾಡುತ್ತಿದ್ದು 2021-22 ನೇ ಸಾಲಿಗೆ 25,000 ಕೋಟಿಗೆ ತಲುಪಿದೆ.ಪ್ರತಿ ದಿನ 84 ಲಕ್ಷ ಲೀಟರ್ ಇದ್ದ ಹಾಲು 94 ಲಕ್ಷ ಲೀಟರ್ ಗೆ ತಲುಪಿದೆ.ನಂದಿನಿ ದೇಶದಲ್ಲಿ ಮಾತ್ರವಲ್ಲದೆ ವಿದೇಶಕ್ಕೂ ತೊಡಗಿಸಿದೆ.ಅಮುಲ್ ಪ್ರಧಾನಿಯವರ ರಾಜ್ಯ ಗುಜರಾತ್ ಎಂದು ಕಾಗ್ರೇಸ್ ಈ ವಿವಾದಕ್ಕೆ ಕೈ ಹಾಕಿದೆ.ಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿಯ ಆಧಾರದ ಮೇಲೆ ಬಹುಮತದಿಂದ ಅಧಿಕಾರಕ್ಕೆ ಬರಲಿದೆ.ಕಾಂಗ್ರೆಸ್ ರಾಜ್ಯದ ನಾಯಕರಗಳಲ್ಲಿ ಹೊಂದಾಣಿಕೆ ಇಲ್ಲದೆ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರ ನಡುವೆ ಈಗಲೇ ಗುದ್ದಾಟ ಪ್ರಾರಂಭವಾಗಿದೆ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು ಉಪಸ್ಥಿತರಿದ್ದರು.
ನಂದಿನಿ – ಅಮುಲ್ ವಿವಾದ ಸೃಷ್ಟಿಸಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿದೆ – ಪ್ರತಾಪಸಿಂಹ ನಾಯಕ್ ಪತ್ರಿಕಾಗೋಷ್ಠಿ
p>