ಕೊಯ್ಯೂರು : ಇಲ್ಲಿಯ ಕೊಂಗುಜೆ ನಿವಾಸಿ ಸಿ.ಎ.ಬ್ಯಾಂಕ್ ನಿವೃತ್ತ ತಿಮ್ಮಯ್ಯ ಗೌಡ ರಬ್ಬರ್ ತೋಟಕ್ಕೆ ಬೆಂಕಿ ಅವಘಡ ಸಂಭವಿಸಿದ ಘಟನೆ ಎ.9 ರಂದು ನಡೆಯಿತು.
ಕೊಯ್ಯೂರು ಕೊಂಗುಜೆ ಸಮೀಪದಲ್ಲಿರುವ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸ್ ಪಾರ್ಮ ನಲ್ಲಿ ಬೆಂಕಿ ಕಿಡಿ ಕಾಣಿಸಿಕೊಂಡು ಪಕ್ಕದ ರಬ್ಬರ್ ತೋಟಕ್ಕೆ ಬೆಂಕಿ ಕಿಡಿ ಅವರಿಸಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿ ಶಾಮಕಕ್ಕೆ ಕರೆ ಮಾಡಿ ತಿಳಿಸಿದರು. ಹಾಗೂ ಸ್ಥಳೀಯ ಮಹಿಳೆಯರು, ಪುರುಷರು ಸೇರಿ ಪಕ್ಕದ ಮನೆಯಿಂದ ನೀರು ತಂದು ಹಾಕಿ ಬೆಂಕಿ ರಭಸವನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿ ಹೆಚ್ಚಿನ ಪ್ರಮಾಣದ ನಷ್ಟವನ್ನು ತಪ್ಪಿಸಿದರು.ನಂತರ ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಆಗಮಿಸಿ ಸಿಬ್ಬಂದಿಗಳು ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಯಾದರು.
ಸುಮಾರು 150 ಹೆಚ್ಚು ಫಲಭರಿತ ರಬ್ಬರ್ ಗಿಡಗಳಿಗೆ ಬೆಂಕಿಯಿಂದ ಹಾನಿಯಾಗಿದೆ.
ವಿದ್ಯುತ್ ಕಂಬಕ್ಕೆ ಗಿಡ ಗಂಟಿಗಳ ಬಳ್ಳಿ ತುಂಬಾ ಹಬ್ಬಿರುವ ಕಾರಣದಿಂದ ಬೆಂಕಿ ಹಚ್ಚಲು ಕಾರಣ ಎಂದು ಎಂದು ಸ್ಥಳೀಯರು ಹೇಳುತ್ತಾರೆ. ಈಗಾಗಲೇ ಈ ಭಾಗದ ಹಲವಾರು ಕಡೆ ಘಟಣೆಗಳು ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳು ಗಮನಹರಿಸಿ ಮುಂದಿನ ದಿನಗಳಲ್ಲಿ ಕೃಷಿಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ, ಗಿಡ ಗಂಟಿಗಳ ಬಳ್ಳಿ ತೆರವುಗೊಳಿಸುವ ಮೂಲಕ ಎಚ್ಚರ ವಹಿಸಬೇಕು ಎಂದು ಸ್ಥಳೀಯ ಕೃಷಿಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಡೆಂಬುಗ ಸಂತೋಷ್, ಕೂಸಪ್ಪ ಪೂಜಾರಿ ಬಜಿಲ,ಕೇಶವ ಗೌಡ ಕೊಂಗುಜೆ, ಚಿತ್ರಾ ಕೆ. ಕೊಂಗುಜೆ, ಹರೀಶ್ ಗೌಡ ಡೆಂಬುಗ,ಸತೀಶ್ ಗೌಡ ಡೆಂಬುಗ,ಪುರಂದರ ಪೂಜಾರಿ ಶಾಂತಿಕೋಡಿ,ನೀಲಮ್ಮ,ಯಕ್ಷಿತಾ,ದನಂಜಯ ಗೌಡ ದೆಲೋಡಿ,ರಾಮಣ್ಣ ಗೌಡ ಉಗ್ರೋಡಿ ಉಪಸ್ಥಿತರಿದ್ದರು.