ಉಜಿರೆ : ಯು.ಎನ್.ಡಿ.ಪಿ-ಎಸ್.ಎ.ಪಿ ಪ್ರಾಜೆಕ್ಟ್ ಕೋಡ್ ಉನ್ನತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ ದಕ್ಷಿಣ ಕನ್ನಡ, ಯೋಜನೆ, ವತಿಯಿಂದ ಉಜಿರೆ ಗ್ರಾಮ ಪಂಚಾಯತ್‌ನಲ್ಲಿ ಸ್ವ-ಸಹಾಯ ಸದಸ್ಯರಿಗೆ ಸ್ವ-ಉದ್ಯೋಗ, ಉದ್ಯಮಶೀಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಂದು ದಿನದ ಕೌಶಲ್ಯ ತರಬೇತಿ ಕಾರ್ಯಾಗಾರ ಮಾ.4 ರಂದು ಜರಗಿತು.
ಕಾರ್ಯಕ್ರಮವನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪವತಿ ಆರ್. ಶೆಟ್ಟಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರವಣ್ ಕುಮಾರ್, ಒಕ್ಕೂಟದ ಉಪಾಧ್ಯಕ್ಷೆ ನಂದಿನಿ, ಯು ಎನ್ ಡಿ ಪಿ ಸ್ವಾಮಿ ಜಿಲ್ಲಾ ಸಂಯೋಜಕ ಶಿವ ಕುಮಾರ್, ಕೀರ್ತನರಾಜ್ ಸಮುದಾಯ ಸಂಯೋಜಕ ಯುಎನ್‌ಡಿಪಿ ಕೀರ್ತನ್ ರಾಜ್. ದೀಕ್ಷಾ, ಲಿಡಿಯ ಉಪಸ್ಥಿತರಿದ್ದರು.
ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪವತಿ ಆರ್ ಶೆಟ್ಟಿ ಮಾತನಾಡಿ ಮಹಿಳೆಯರಿಗೆ ಸ್ವ-ಉದ್ಯೋಗ, ಲಭ್ಯವಿರುವ ಸರ್ಕಾರದ ಸಾಲಗಳ ಬಳಕೆ ಮತ್ತು ಪಂಚಾಯತಿಯಿಂದ ದೊರೆಯುವ ಸವಲತ್ತುಗಳನ್ನು ಬಳಸಿಕೊಳ್ಳುವ ಕುರಿತು ಹಾಗೂ ಎರಡು ದಿನಗಳ ಪ್ರಾಜೆಕ್ಟ್ ಕೋಡ್ ಉನ್ನತಿ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವ ಕುರಿತು ಮಾತನಾಡಿದರು.
ಶಿವಕುಮಾರ್ (ಜಿಲ್ಲಾ ಸಂಯೋಜಕ ಯುಎನ್‌ಡಿಪಿ) ಪ್ರಸ್ತಾವಿಕವಾಗಿ ಮಾತನಾಡಿ ಪ್ರಾಜೆಕ್ಟ್ ಕೋಡ್ ಉನ್ನತಿ ಕಾರ್ಯಕ್ರಮ, ಕುಟುಂಬದಲ್ಲಿ ಮಹಿಳೆಯರ ಪಾತ್ರ, ಮಹಿಳೆಯರು ಸ್ವ-ಉದ್ಯೋಗ ತರಬೇತಿಯ ಬಗ್ಗೆ ಮಾಹಿತಿ ಬಗ್ಗೆ ಹಾಗೂ ಎಫ್.ಎಸ್.ಎಸ್. ಎ.ಐ, ಎಮ್.ಎಸ್.ಎಮ್.ಇ ಪ್ರಮಾಣ ಪತ್ರ ಪಡೆಯುವುದರ ಬಗ್ಗೆ ಮತ್ತು ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದಾದ ಕ್ಷೇತ್ರಗಳ ಕುರಿತು ಮಾತನಾಡಿದರು,
ಶ್ರೀಮತಿ ಉಷಾ ನಾಯಕ್ (ಎಫ್ ಎಲ್ ಸಿ) ಅವರು ಸ್ವ-ಸಹಾಯಗಳು ಗುಂಪುಗಳು ಉಳಿತಾಯ ಮತ್ತು ಸಾಲಕ್ಕೆ ಸೀಮಿತವಾಗಿರಬಾರದು ಬದಲಿಗೆ ಮಹಿಳೆಯರಿಗೆ ಕಿರು ಉದ್ಯಮವನ್ನು ಪ್ರಾರಂಭಿಸಲು ಸ್ವ-ಉದ್ಯೋಗ ಪ್ರರಭ ಮಾಡಲು ಪಿ.ಎಮ್.ಎಫ್.ಎಮ್.ಇ,ಪಿ.ಎಮ್.ಇ .ಜಿ.ಪಿ ಸಬ್ಸಿಡಿ ಸಾಲ ಸೌಲಭ್ಯ ,ಸಾಮಾಜಿಕ ಭದ್ರತೆ ಬಗ್ಗೆ ಮಾಹಿತಿ ನೀಡಿದರು.ಶಿಶು ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ರತ್ನಾವತಿ ನಿರೂಪಿಸಿದರು. ಎಂ ಬಿ ಕೆ ಶ್ರೀಮತಿ ಪೂರ್ಣಿಮಾ ಶೆಟ್ಟಿ, 122 ಸ್ವ-ಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿದ್ದರು.