ಬೆಳ್ತಂಗಡಿ: ಪಟ್ಟಣ ಪಂಚಾಯತ್ ಬೆಳ್ತಂಗಡಿ ಮತ್ತು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಮಹಿಳಾ ವೃಂದ ಬೆಳ್ತಂಗಡಿ ಇದರ ವತಿಯಿಂದ ತಾರಸಿ ಕೈತೋಟದ ಬಗ್ಗೆ ಕಾರ್ಯಾಗಾರವು ಫೆ.28 ರಂದು ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ನಡೆಯಿತು.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ರಾಜೇಶ್ ಕೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್ ವಹಿಸಿದ್ದರು.
ವೇದಿಕೆಯಲ್ಲಿ ಬೆಳ್ತಂಗಡಿ ಮಹಿಳಾ ವೃಂದದ ಅಧ್ಯಕ್ಷೆ ಆಶಾ ಸತೀಶ್, ಮಹಿಳಾ ಮಂಡಲಗಳ ಒಕ್ಕೂಟದ ಗೌರವ ಪೋಷಕರಾದ ಲೋಕೇಶ್ವರಿ ವಿನಯಚ್ಚಂದ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆರ್ಯಭಟ ಪ್ರಶಸ್ತಿ ವಿಜೇತ ಜಾಪದ ಕಲಾವಿದ, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಉದಯ ಕುಮಾರ್ ಲಾಯಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿನೋದಿನಿ ರಾಮಪ್ಪ ಪ್ರಾರ್ಥಿಸಿದರು. ಪಟ್ಟಣ ಪಂಚಾಯತ್ ಸಿಬ್ಬಂದಿ ಸಚಿನ್ ಸ್ವಾಗತಿಸಿದರು. ಮಹಿಳಾ ವೃಂದದ ಸದಸ್ಯೆ ಹೇಮಾವತಿ ಕಾರ್ಯಕ್ರಮ ನಿರೂಪಿಸಿ, ಉಮಾ ಆರ್ ರಾವ್ ಸನ್ಮಾನ ಪತ್ರ ವಾಚಿಸಿದರು.ಉಷಾ ಲಕ್ಷ್ಮಣ್ ಪರಿಚಯಿಸಿದರು, ಆಶಾ ಸತೀಸ್ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಶಾಂತ ಬಂಗೇರ, ಜಯಂತಿ ಹಾರಬೆ, ವೀಣಾ ವಿ ಕುಮಾರ್, ರಶ್ಮಿ ಪಟವರ್ಧನ್, ಯಶೋಧ ಲಾಯಿಲ, ನೇತ್ರಾ ಅಶೋಕ್, ರಮಾ ಪರಂಜಪೆ, ಜಯಶ್ರೀ ಪ್ರಕಾಶ್, ಪ್ರೀತಿ ಆರ್ ರಾವ್ ಉಪಸ್ಥಿತರಿದ್ದು ಸಹಕರಿಸಿದರು.