ಕೊಯ್ಯೂರು :ಧರ್ಮವೇ ನಮ್ಮ ದೇಶದ ಮೂಲವಾಗಿದೆ, ಇಂದು ಹಿಂದೂಗಳಿಗೆ ಧರ್ಮಶಿಕ್ಷಣ ಲಭಿಸದೆ, ಸಮಾಜವು ಅದೋಗತಿಯೆಡೆಗೆ ಸಾಗುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬ ಹಿಂದೂವೂ ಧರ್ಮಶಿಕ್ಷಣ ಪಡೆದು ಧರ್ಮಚರಣೆಯನ್ನು ಮಾಡುವ ಮೂಲಕ ಆಧ್ಯಾತ್ಮಿಕ ಬಲ ಹೆಚ್ಚಿಸಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಟ್ಟಿಬದ್ಧರಾಗಬೇಕಿದೆ ಎಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕ ರಮಾನಂದ ಗೌಡ ಕರೆ ನೀಡಿದರು. ಅವರು ಫೆ.25 ರಂದು ಕೊಯ್ಯೂರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆದೂರ್ ಪೇರಲ್ ನಂದಗೋಕುಲ ಸಭಾ ಭವನದಲ್ಲಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ವ್ಯಾಖ್ಯಾನದಲ್ಲಿ ಮಾತನಾಡಿದರು.
ಹಿಂದೆ ಗುರುವಿನ ಮೂಲಕ ಜ್ಞಾನವನ್ನು ಪಡೆದು ಶಿಷ್ಯರು ಸಾಧನೆಯನ್ನು ಮಾಡುತ್ತಿದ್ದರು. ಭಾರತದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ಹಿಂದೂ ಧರ್ಮ ಉಳಿಯಬೇಕಾದರೆ ನಾವೆಲ್ಲ ಹಿಂದೂಗಳು ಧರ್ಮಚರಣೆಯನ್ನು ಮಾಡಬೇಕು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಹೆಚ್ಚಿಸಬೇಕು ಎಂದರು. ಹಿಂದೂಜನಜಾಗೃತಿ ದಕ್ಷಿಣ ಕರ್ನಾಟಕ ರಾಜ್ಯ ಸಮನ್ವಕ ಚಂದ್ರ ಮೊಗೇರ ಮಾತನಾಡಿ ಇಂದು ದೇಶದಲ್ಲಿ ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್, ವಕ್ಫ್ ಕಾಯ್ದೆ, ಭಯೋತ್ಪಾದನೆ, ಭ್ರಷ್ಟಾಚಾರ ಸೇರಿದಂತೆ ಅನೇಕ ಅಹಿತಕರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಮ್ಮ ದೇಶದಲ್ಲಿ ಬೆಳೆಯುತ್ತಿರುವ ಹೊಸ ಪೀಳಿಗೆಗಳಿಗೆ ಧರ್ಮದ ಕುರಿತು ಜ್ಞಾನ ಸಿಗದಿರುವುದೇ ಈ ಅಧರ್ಮಾಚರಣೆಗೆ ಮೂಲ ಕಾರಣವೆಂದು ಎಂದರು.