ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ದಿನಾಚರಣೆಯನ್ನು ಫೆ.28 ರಂದು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಧರ್ಮಸ್ಥಳ ಪಿ.ಜಿ.ಕಾಲೇಜು ಬಯೋಟೆಕ್ನಲಾಜಿ ಮುಖ್ಯಸ್ಥೆ ಡಾ. ಪ್ರಾರ್ಥನಾ ಸರ್.ಸಿ.ವಿ.ರಾಮನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.ಬಳಿಕ ಮಾತನಾಡುತ್ತಾ ವಿಜ್ಞಾನ ಎಂದರೇನು? ಕುತೂಹಲ ತುಂಬಿದ ಕಣ್ಣುಗಳಿಂದ ಯಾವುದೇ ವಿಷಯ ಅಥವಾ ವಸ್ತುಗಳನ್ನು ಗಮನಿಸಿ ಕೂಲಂಕುಷವಾಗಿ ಅಭ್ಯಸಿಸಿ ಪರೀಕ್ಷಿಸಿ ಪರಿಹಾರ ಕಂಡುಕೊಳ್ಳುವುದು ವಿಜ್ಞಾನ. ವಿಜ್ಞಾನ ಕಲಿಕೆಯನ್ನು ಪ್ರೀತಿಸಲು ಯಾವುದೆಲ್ಲ ಕ್ರಮ ಕಂಡು ಕೊಳ್ಳುತ್ತಿರಾ, ವಿಜ್ಞಾನದ ಜ್ಞಾನದ ವಿಸ್ತಾರ ಮಾಡುವುದು ಹೇಗೆ?ವಿಜ್ಞಾನದ ಕೆಲವು ಪತ್ರಿಕೆಗಳು ಯಾವುವು? ಅವುಗಳ ಅಗತ್ಯ ಇದೆ? ಭಾರತೀಯ ವಿಜ್ಞಾನಿಗಳು ಅವರ ಸಾಧನೆ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಒಂದಿಷ್ಟು ವಿಚಾರಗಳ ಕುರಿತಾಗಿ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ಮಾಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ನಿಜ ಜೀವನದಲ್ಲಿ ವಿಜ್ಞಾನದ ಕುರಿತಾಗಿ ಮಾಹಿತಿ ನೀಡಿದರು. ಶಾಲಾ ವಿಧ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಶಾಲೆಯ ಒಳಗೆ ವಿಜ್ಞಾನ ದಿನಕ್ಕೆ ಸಂಬಂಧಿಸಿದ ಬಣ್ಣದ ರಂಗೋಲಿ ಎಲ್ಲರ ಗಮನ ಸೆಳೆಯುತ್ತಿತ್ತು. ಶಾಲಾ ವಿದ್ಯಾರ್ಥಿ ಉಪನಾಯಕ ಜಸ್ಟಿನ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಹರಿಣಿ ಅತಿಥಿಗಳ ಕಿರು ಪರಿಚಯವನ್ನು ನೀಡಿ, ನಿವೇದ್ಯ ಸ್ವಾಗತಿಸಿ ಅಭಿರಾಮ್ ಧನ್ಯವಾದವಿತ್ತರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.