ಮಂಜೊಟ್ಟಿ :ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝ ಗಾರ್ಡನ್ ಮಂಜೊಟ್ಟಿ ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಫೆ. 28 ರಂದು ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯನಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿಶೇಷವಾದ ಜ್ಞಾನವನ್ನು ತೊಡಗಿಸಿಕೊಂಡರೆ ಎಲ್ಲರೂ ವಿಜ್ಞಾನಿಗಳಾಗಬಹುದು ಎಂದರು. ವಿದ್ಯಾರ್ಥಿಗಳೇ ತಯಾರಿಸಿದ ವಿಜ್ಞಾನ ಮಾಡೆಲ್ ಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಿದ್ಯಾ ಸಂಸ್ಥೆಯ ಸಂಚಾಲಕ ಜನಾಬ್ ಸೈಯದ್ ಹಬೀಬ್, ಕಾರ್ಯದರ್ಶಿ ಸೈಯದ್ ಆಯುಬ್ ಹಾಗೂ ಶಾಲಾ ಮುಖ್ಯ ಉಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಉಪಸ್ಥಿತರಿದ್ದರು.
ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ವಿವಿಧ ಬಗೆಯ ಮಾಡೆಲ್ ಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣಿಕರ್ತರಾದ ಶಾಲಾ ವಿಜ್ಞಾನ ವಿಷಯ ಶಿಕ್ಷಕಿ ಶ್ರೀಮತಿ ಅಬ್ಸತ್ ಮತ್ತು ಸಹಕರಿಸಿದ ಶಿಕ್ಷಕಿ ಶ್ರೀಮತಿ ನುಸೈಬ ಮತ್ತು ಶಮೀರಾ ಇವರನ್ನು ಶ್ಲಾಘಿಸಲಾಯಿತು.
p>