ಬಳಂಜ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಒಕ್ಕೂಟ ಬಳಂಜ ಬಿ.ವಿಭಾಗ, ಜನಜಾಗೃತಿ ವೇದಿಕೆ ಗ್ರಾಮ ಸಮಿತಿ ಬಳಂಜ ಇದರ ನೇತೃತ್ವದಲ್ಲಿ ಒಕ್ಕೂಟದ ತ್ರೈ ಮಾಸಿಕ ಸಭೆಯು ಬಳಂಜ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಪ್ರಮೋದ್ ಬಿ.ಯಸ್ ವಹಿಸಿದ್ದರು. ಗುರುವಾಯನಕೆರೆ ವಲಯ ಮೇಲ್ವಿಚಾರಕ ಅಶ್ವಥ್ ರವರು ಯೋಜನೆಯ ಹಲವು ಜನಪರ ಸೇವಾ ಚಟುವಟಿಕೆ ಬಗ್ಗೆ ಸಭೆಯಲ್ಲಿ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಒಕ್ಕೂಟದಲ್ಲಿಯೇ ಅತ್ಯುತ್ತಮ ಸಂಘವೆಂದು ಹೆಸರನ್ನು ಪಡೆದಿರುವ ಸುದರ್ಶನ ಸ್ವ ಸಹಾಯ ಸಂಘದ ವಾರ್ಷಿಕೋತ್ಸವ ಮತ್ತು ಜವಾಬ್ದಾರಿಯಲ್ಲಿ ಒಕ್ಕೂಟದ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸದಾನಂದ ಪೂಜಾರಿ ಉಂಗಿಲಬೈಲು, ಜನಜಾಗೃತಿ ವೇದಿಕೆಯ ಗ್ರಾಮ ಸಮಿತಿ ಅಧ್ಯಕ್ಷರಾದ ಸದಾನಂದ ಸಾಲಿಯಾನ್ ಭಾಗವಹಿಸಿದ್ದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಸಿಬ್ಬಂದಿಯವರು ಆರೋಗ್ಯ ಮಾಹಿತಿಯನ್ನು ನೀಡಿದರು. ಸುದರ್ಶನ ಸಂಘದ ಅಧ್ಯಕ್ಷರಾದ ಅಬೂಬಕ್ಕರ್ ರವರು ಆರ್ಥಿಕವಾಗಿ ಹಿಂದುಳಿದ ಪದ್ಮಾವತಿ ಶೆಟ್ಟಿಯವರ ಮನೆ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯಧನ ನೀಡಿದರು. ಸೇವಾಪ್ರತಿನಿಧಿ ಪ್ರಮೀಳಾ ರವರು ಸುದರ್ಶನ ತಂಡದ ಸೇವಾ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.
ವೇದಿಕೆಯಲ್ಲಿ ಎ ಒಕ್ಕೂಟದ ಅಧ್ಯಕ್ಷರಾದ ಡೀಕಯ್ಯ ಕೆ, ಬಿ.ಒಕ್ಕೂಟದ ಹರೀಶ್ ಹೆಗ್ಡೆ, ಮಂಜುನಾಥ್ ಭಟ್, ನಿರೂಪಮ ಜೈನ್, ರೇವತಿ ಶೆಟ್ಟಿ ನಿತ್ಯಾನಂದ ಹೆಗ್ಡೆ ಉಪಸ್ಥಿತರಿದ್ದರು. ರತ್ನಾಕರ ಶೆಟ್ಟಿ ಪ್ರಾರ್ಥಿಸಿದರು. ಸುದರ್ಶನ ತಂಡದ ಗಂಗಾಧರ ಬಿ.ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಬೂಬಕ್ಕರ್ ಬಳಂಜ ಧನ್ಯವಾದವಿತ್ತರು.