ನಡ ಗ್ರಾ.ಪಂ.ನಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ ಬಗ್ಗೆ ತರಬೇತಿ

0

ನಡ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನಡ ಗ್ರಾಮ ಪಂಚಾಯತಿನಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ ಬಗ್ಗೆ ತರಬೇತಿಯನ್ನು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಫೆ.21 ರಂದು ಆಯೋಜಿಸಲಾಗಿತ್ತು.

ತರಬೇತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸಮಿತಿ ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನೀರುಘಂಟೆಯವರು, ಆಶಾ ಕಾರ್ಯಕರ್ತರು ಭಾಗವಹಿಸಿದರು. ತರಬೇತಿಯಲ್ಲಿ ಒಟ್ಟು 16 ಮಂದಿ ಭಾಗವಹಿಸಿದರು. ತರಬೇತಿಯನ್ನು ಗ್ರಾಮ್ಸ್ ಸಂಸ್ಥೆಯ ಬೆಳ್ತಂಗಡಿ ತಾಲೂಕಿನ ಸಿಬ್ಬಂದಿ ಪುಷ್ಪಲತಾರವರು ತರಬೇತಿಯನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here