ಅಳದಂಗಡಿ :ಅಜಿಲ ಸೀಮೆಯ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದು ಹಾಕಿದ ವಿವಾದಿತ ರೋಹಿತ್ ಚಕ್ರತೀರ್ಥ ಶಿಕ್ಷಣ ಮತ್ತು ಧರ್ಮ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಲು ಕರೆದಿರುವ ವಿಚಾರದಲ್ಲಿ ಉಂಟಾಗಿರುವ ವಿವಾದದ ಕುರಿತಂತೆ ತಿಮ್ಮಣ್ಣರಸರಾದ ಡಾ|| ಪದ್ಮ ಪ್ರಸಾದ್ ಅಜಿಲರವರ ಆಹ್ವಾನದ ಮೇರೆಗೆ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರ ನೇತ್ರತ್ವದಲ್ಲಿ ಬಿಲ್ಲವ ಸಮಾಜದ ಪ್ರಮುಖರ ನಿಯೋಗ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪಪ್ರಸಾದ್ ಅಜಿಲರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ರೋಹಿತ್ ಚಕ್ರತೀರ್ಥ ಉಪನ್ಯಾಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಭಗವಾನ್ ಮಹಾವೀರ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್, ಕುವೆಂಪು, ರಾಣಿ ಅಬ್ಬಕ್ಕ ಮತ್ತು ಕಯ್ಯಾರ ಕಿಂಞಣ್ಣ ರೈ ಮುಂತಾದ ದಾರ್ಶನಿಕರ ವ್ಯಕ್ತಿತ್ವಕ್ಕೆ ಕುಂದು ಬರುವ ರೀತಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ನಡೆಸಿ ಕೊನೆಗೆ ಸರಕಾರದ ಆದೇಶದಂತೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ಪದಚ್ಯುತಗೊಂಡ ವಿಕೃತ ವಿಚಾರಧಾರೆಗಳನ್ನು ಹೊಂದಿರುವ ರೋಹಿತ್ ಚಕ್ರತೀರ್ಥರನ್ನು ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಒಕ್ಕೊರಲಿನಿಂದ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ|| ಪದ್ಮಪ್ರಸಾದ್ ಅಜಿಲರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳ ವಿರೋಧವನ್ನು ದಿಕ್ಕರಿಸಿ ವಿವಾದಿತ ವ್ಯಕ್ತಿಗಳನ್ನು ಆಹ್ವಾನಿಸುವ ಯಾವುದೇ ಉದ್ದೇಶ ನಮಗಿಲ್ಲ. ನಿಮ್ಮ ಭಾವನೆಯನ್ನು ಗೌರವಿಸಿ ವಿವಿಧ ಸಮಿತಿಯವರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಭರವಸೆಯಿತ್ತರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಪಿ.ಕೆ ರಾಜು ಪೂಜಾರಿ, ಮಾಜಿ ಪ್ರಧಾನ ಕಾರ್ಯದರ್ಶಿ ಎಚ್. ಧರ್ಣಪ್ಪ ಪೂಜಾರಿ, ಬಳಂಜ, ಉಪಾದ್ಯಕ್ಷರಾದ ಶೇಖರ ಬಂಗೇರ, ಅಳದಂಗಡಿ ವಲಯಾದ್ಯಕ್ಷ ಕೊಡಂಗೆ ಸಂಜೀವ ಪೂಜಾರಿ, ವೇಣೂರು ವಲಯಾದ್ಯಕ್ಷ ಹರೀಶ ಪೂಜಾರಿ ಪೊಕ್ಕಿ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೇಶ್ ಕೋಟ್ಯಾನ್, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಮನೋಹರ್ ಕುಮಾರ್, ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್, ವೇಣೂರು ಘಟಕದ ಅಧ್ಯಕ್ಷೆ ಶ್ರೀಮತಿ ಹರಿಣಿ ಕರುಣಾಕರ ಪೂಜಾರಿ, ಸಂಘದ ನಿರ್ದೇಶಕರಾದ ರಮೇಶ್ ಪೂಜಾರಿ ಪಡ್ಡಾಯಿ ಮಜಲು, ಪ್ರಮುಖರಾದ ವಿಶ್ವನಾಥ ಪೂಜಾರಿ ಕುದ್ಯಾಡಿ, ಸತೀಶ್ ಕಾಶಿಪಟ್ಣ, ರವೀಂದ್ರ ಅಮೀನ್ ಬಳಂಜ, ನ್ಯಾಯವಾದಿ ಸತೀಶ್ ಪೂಜಾರಿ, ಪಿ. ಎನ್, ಯುವ ವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಎಂ.ಕೆ ಪ್ರಸಾದ್, ನವೀನ್ ಪೂಜಾರಿ, ಪಚ್ಚೇರಿ, ನಾರಾವಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅದ್ಯಕ್ಷ ಯೋಗೀಶ ಪೂಜಾರಿ, ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್ ಡೊಂಕಬೆಟ್ಟು, ಹರೀಶ್ಚಂದ್ರ ಪೂಜಾರಿ ಬಜಿರೆಗುತ್ತು, ಚಂದ್ರಶೇಖರ ಅಳದಂಗಡಿ, ಸುರೇಶ ಪೂಜಾರಿ, ಅಂಡಿಜೆ, ಪದ್ಮನಾಭ ಪೂಜಾರಿ ನಿಟ್ಟಡೆ, ಸದಾನಂದ ಪೂಜಾರಿ, ನಾರಾಯಣ ಪೂಜಾರಿ, ಸಂತೋಷ್ ಪೂಜಾರಿ, ಮಹಾಬಲ ಪೂಜಾರಿ, ಯಶೋಧರ ಕೋಟ್ಯಾನ್, ಧರ್ಣಪ್ಪ ಪೂಜಾರಿ ದೋರಿಂಜೆ, ವಿಠಲ ಪೂಜಾರಿ ನಿಟ್ಟಡೆ, ಲಕ್ಷಣ ಪೂಜಾರಿ, ಗೋಪಾಲ ಪೆಂರ್ಬುಡ, ಸತೀಶ ಕಜಿಪಟ್ಟ, ಸದಾಶಿವ ಪೂಜಾರಿ ಊರ, ಚಂದ್ರಶೇಖರ, ಸಂದೀಪ್ ಎಸ್.ಎನ್, ನಾರಾಯಣ ಪೂಜಾರಿ ಉಚ್ಚೂರು ಮೊದಲಾದವರು ಉಪಸ್ಥಿತರಿದ್ದರು.