ಅಳದಂಗಡಿ : ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವವು ಫೆ. 4 ರಿಂದ ಪ್ರಾರಂಭಗೊಂಡು ಫೆ. 9ರವರೆಗೆ ನಡೆಯಲಿದೆ.
ಫೆ. 7 ರಂದು ಬೆಳಿಗ್ಗೆ ಗಣಹೋಮ, ಅಧಿವಾಸೋದ್ಧಾರ ಪ್ರಾಸಾದ ಪ್ರತಿಷ್ಠೆ ಪುಣ್ಯಾಹ ನಪುಂಸಕ ಕಲೆಯಲ್ಲಿ ರಂತ್ನಾವಿನ್ಯಾಸ , ಪೀಠ ಪ್ರತಿಷ್ಠೆ ಪರವಾಹನೆ ಸ್ಥೂಲವಾಹನೆ, ಬೆಳಿಗ್ಗೆ 9..15 ಕ್ಕೆ ಶ್ರೀ ಮಹಾಗಣಪತಿ ದೇವರ ನೂತನ ಬಿಂಬ ಪ್ರತಿಷ್ಠೆ , ಕುಂಬೇಶ ಕಲಶಾಭಿಷೇಕ , ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಆವಾಹನೆ ಶಿಖರ ಪ್ರತಿಷ್ಠೆ, ಪರಿವಾರ ಪ್ರತಿಷ್ಠೆ, ಕಲಶಾಭಿಷೇಕ, ಚಂಡಿಕಾಹೋಮ ನಡೆಯಲಿದೆ.
ಬೆಳಿಗ್ಗೆ 8 ಕ್ಕೆ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ,ಸಂಜೆ 5 ಕ್ಕೆ ದುರ್ಗಾ, ಅಂಕುರ ಪೂಜೆ, ಮಂಡಲ ರಚನೆ ಹಾಗೂ ಬಳಂಜ ಪಂಚಶ್ರೀ ಮಹಿಳಾ ಭಜನಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಗಂಟೆಗೆ ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ವಹಿಸಲಿದ್ದು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ ಗಂಟೆ 9 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉಮೇಶ್ ಮಿಜಾರು ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ಅಭಿನಯದ ತುಳು ಹಾಸ್ಯಮಯ ನಾಟಕ ಕುಸಲ್ದಗೊಬ್ಬು ನಾಟಕ ಪ್ರದರ್ಶನಗೊಳ್ಳಲಿದೆ.