ಉಜಿರೆ: ರಾಷ್ಟ್ರೀಯ ಹಬ್ಬವಾದ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅನುಗ್ರಹ ಶಿಕ್ಷಣ ಸಂಸ್ಥೆ, ಉಜಿರೆ ಇಲ್ಲಿ ಪ್ರತೀ ವರ್ಷದಂತೆ ವಿಜ್ರಂಭಣೆಯಿಂದ ಆಚರಿಸಲಾಯಿತು.
ಭಾರತೀಯ ಸೈನಿಕರಾಗಿ ನಿವೃತ್ತಿಯನ್ನು ಪಡೆದಿರುವ ವಾಲ್ಟರ್ ಸ್ವಿಕೇರಾ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಮ್ಮ ಶಾಲಾ ಪ್ರಾಂಶುಪಾಲರಾದ ಪೂಜ್ಯ ರೆ|ಫಾ| ವಿಜಯ್ ಲೋಬೋ ರವರು ಪ್ರಜಾಪ್ರಭುತ್ವ ನಮ್ಮ ದೇಶದಲ್ಲಿ ಸಂವಿಧಾನದಲ್ಲಿ ಅಡಕಲಾಗಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಹಾಗೂ ಸೌಹಾರ್ಧಯುತವಾಗಿ ಏಕತೆಯಿಂದ ನಾವೆಲ್ಲರೂ ಬಾಳಿ ಬದುಕಬೇಕೆಂಬ ಸಂದೇಶ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಆಂಟನಿ ಫೆರ್ನಾಂಡೀಸ್, ಆಡಳಿತ ಮಂಡಳಿಯ ಸದಸ್ಯ ಪ್ರವೀಣ್ ಫೆರ್ನಾಂಡೀಸ್ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ರವಿ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪಥ ಸಂಚಲನ ಹಾಗೂ ಸಾಮೂಹಿಕ ಕವಾಯತು ನಡೆಯಿತು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು. ವಿದ್ಯಾರ್ಥಿ ಆಲ್ರೋನ್ ಫೆರ್ನಾಂಡೀಸ್ ಪ್ರಜಾಪ್ರಭುತ್ವ ದಿನದ ಬಗ್ಗೆ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಶಿಕ್ಷಕಿಯಾದ ಶ್ರೀಮತಿ ಆಶ್ವಿನಿ ರವರು ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.