ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ಕಡಿರುದ್ಯಾವರ ಆರೋಪಿ ಬಾಬಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ

0

ಕಡಿರುದ್ಯಾವರ : ಕಡಿರುದ್ಯಾವರ ಗ್ರಾಮದ ಎರ್ಮಳಪಲ್ಕೆ ಮಠ ಎಂಬಲ್ಲಿ ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಬಾಬಿ (48) ಎಂಬುವವರಿಗೆ ಜಿಲ್ಲಾ ನ್ಯಾಯಾಲಯವು 20 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ರೂ.50 ಸಾವಿರ ದಂಡ ತಪ್ಪಿದ್ದಲ್ಲಿ 6 ತಿಂಗಳ ಕಠಿಣ ಕಾರಾಗೃಹ‌ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಡಿರುದ್ಯಾವರ ಗ್ರಾಮದ ಎರ್ಮಳಪಲ್ಕೆ ಮಠ ಎಂಬಲ್ಲಿ 19.12.2021 ರಂದು 20-00 ಗಂಟೆಯಿಂದ 26.02.2022 ರಂದು 20.30 ಗಂಟೆಯ ಮದ್ಯದ ಅವಧಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವಾರು ಬಾರಿ ಲೈಂಗಿಕ ಸಂಪರ್ಕ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೊಂದ ಬಾಲಕಿ 03.03.2022 ರಂದು ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ಠಾಣಾ ಅಕ್ರ 15/2022 ಕಲಂ: 4 & 6 ಫೋಕ್ಸೋ, ಕಾಯ್ದೆ & 376 ಐಪಿಸಿ ಯಂತೆ ಬೆಳ್ತಂಗಡಿ ಠಾಣಾ ಪಿ ಎಸ್ ಐ ನಂದಕುಮಾರ್‌ ರವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬಳಿಕ ಈ ಪ್ರಕರಣದಲ್ಲಿ. ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ ರವರು ಆರೋಪಿ ಬಾಬಿ (48) ಎಂಬಾತನನ್ನು ಬಂಧಿಸಿ ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲಿಸಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿತನ ಆರೋಪ ಸಾಬೀತಾಗಿರುತ್ತದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ -2 (ಪೋಕ್ಸೋ) ಇದರ ನ್ಯಾಯಾಧೀಶರಾದ ರಾಧಾಕೃಷ್ಣ ರವರು ಜ.24 ರಂದು ಅಪರಾಧಿಗೆ 20 ವರ್ಷಗಳ ಕಾರಾಗೃಹ ಹಾಗೂ 50 ಸಾವಿರ ರೂಪಾಯಿ ದಂಡಕಟ್ಟಲು ತಪ್ಪಿದಲ್ಲಿ 6 ತಿಂಗಳ ಕಠಿಣ ಕಾರಾಗೃಹವಾಸ ವಿಧಿಸಿ ಆದೇಶ ಹೊರಡಿಸಿರುತ್ತಾರೆ.

p>

LEAVE A REPLY

Please enter your comment!
Please enter your name here