ಗುರಿಪಳ್ಳ: ವಿದ್ಯುತ್ ಸಮರ್ಪಕವಾಗಿ ಪೂರೈಸುವಂತೆ ಮೆಸ್ಕಾಂಗೆ ಮನವಿ ಸಲ್ಲಿಸಿದ ವಿದ್ಯುತ್ ಬಳಕೆದಾರರು

0

ಗುರಿಪಳ್ಳ : ಗುರಿಪಳ್ಳದಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದಾಗಿ ಕಳೆದ ಕೆಲವು ವರ್ಷಗಳಿಂದ ಕೃಷಿಕರು ಕಂಗೆಟ್ಟಿದ್ದು ಈ ಬಗ್ಗೆ ಕಳೆದ ಮೂರು ವರ್ಷಗಳ ಹಿಂದೆಯೂ ದೂರು ಸಲ್ಲಿಸಲಾಗಿತ್ತು ಆದರೆ ಈವರೆಗೂ ಕೂಡ ಇದರ ಬಗ್ಗೆ ಸರಿಯಾದ ಕ್ರಮವನ್ನು ಮೆಸ್ಕಾಂ ಇಲಾಖೆ ಕೈಗೊಂಡಿರುವುದಿಲ್ಲ ಇದರಿಂದಾಗಿ ಇಲ್ಲಿ ಯಾವುದೇ ಕೃಷಿ ಪಂಪ್ ಸೆಟ್ ಲೋ ವೋಲ್ಟೇಜ್ ನಿಂದಾಗಿ ಚಾಲನೆಗೊಳ್ಳುವುದಿಲ್ಲ ಅದು ಅಲ್ಲದೇ ಇತ್ತೀಚಿನ ಕೆಲ ದಿನಗಳಿಂದ ಯಾವುದೇ ಮಾಹಿತಿ ನೀಡದೆ ಪಂಪ್ ಲೈನ್ ಗೆ ಲೋಡ್ ಶೆಡ್ಡಿಂಗ್ ಮಾಡಿ ವಿದ್ಯುತ್ ತೆಗೆಯುತ್ತಿದ್ದು ಕೃಷಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ ಆದ್ದರಿಂದ ಈ ಸಮಸ್ಯೆಯನ್ನು ಆದಷ್ಡು ಬೇಗ ಬಗೆಹರಿಸುವಂತೆ ಜ.25 ರಂದು ನಡೆದ ವಿದ್ಯುತ್ ಅದಾಲತ್ ನಲ್ಲಿ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಉತ್ತರಿಸಿದ ಅವರು 15ದಿವಸಗಳ ಒಳಗೆ ಗುರಿಪಳ್ಳದಲ್ಲಿ ಪ್ರತ್ಯೇಕ ಟಿ.ಸಿ ಅಳವಡಿಸಿ ವಿದ್ಯುತ್ ಸಮರ್ಪಕವಾಗಿ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಯಶೋಧರ ಗೌಡ ಕೊಡ್ಡೋಲು, ರಮಾನಂದ ಶರ್ಮಾ ಗುರಿಪಳ್ಳ, ರವಿ ಶೆಟ್ಟಿ ಹೊಸಮನೆ, ರಾಧಾಕೃಷ್ಣ ಭಟ್ ಗುರಿಪಳ್ಳ, ಕೊರಗಪ್ಪ ಪೂಜಾರಿ ಬನತ್ತಡಿ, ಸುಂದರ ಶೆಟ್ಟಿ ಬಳಂದ್ರಬೆಟ್ಟು, ಸದಾಶಿವ ಗೌಡ ಕೊಡ್ಡೋಲು, ಸದಾನಂದ ಗೌಡ ಕೇರಿಮಾರು, ರಾಮಣ್ಣ ಗೌಡ ಕೊಡ್ಡೋಲು, ಸುನಿಲ್ ಶೆಟ್ಟಿ, ಹರೀಶ್ ಗೌಡ ಜಯನಗರ, ಗುರುರಾಜ್ ಗುರಿಪಳ್ಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here