ಉರುವಾಲು : ಹುಬ್ಬಳ್ಳಿ ನಗರದ ಗೋಕುಲ್ ರಸ್ತೆ ಗೋಕುಲ್ ಗಾರ್ಡನ್ ಸಭಾಭವನದಲ್ಲಿ ಪ್ರಥಮ ಅಂತರ್ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬೆಳ್ತಂಗಡಿ ತಾಲೂಕಿನಿಂದ ಶಾಸಕ ಹರೀಶ್ ಪೂಂಜ ನಾಯಕತ್ವದಲ್ಲಿ ಹಾಗೂ ಎಲ್ಲಾ ಖರ್ಚುಗಳ ಕೊಡುಗೆಯಿಂದ ವಿವಿಧ ಶಾಲೆಯ 18 ವಿದ್ಯಾರ್ಥಿಗಳು ಭಾಗವಹಿಸಿ 4 ಚಿನ್ನದ ಪದಕ, 4 ಬೆಳ್ಳಿಯ ಪದಕ, 10 ಕಂಚಿನ ಪದಕ, ಹಾಗೂ ಆಕರ್ಷಕ ತಂಡ ಪ್ರಶಸ್ತಿ ಪಡೆದು ತಾಲೂಕಿಗೆ ಕೀರ್ತಿ ಹೊಸ ದಾಖಲೆ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಇವರಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉರುವಾಲು ಇಲ್ಲಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿರುತ್ತರೆ. ಯಜ್ಞೆಶ್ (ಚಿನ್ನ), ಕಾರ್ತಿಕ್ (ಚಿನ್ನ), ಸಾಧ್ವಿ (ಬೆಳ್ಳಿ), ಸಾಕೇತ್ (ಬೆಳ್ಳಿ), ಅರ್ಪಿತ್ (ಬೆಳ್ಳಿ), ರಿಷಿಕಾ ಆರ್ ರೈ (ಕಂಚು), ಮಾನ್ವಿ ಎ ಜೈನ್ (ಕಂಚು), ಶ್ರೀ ಲಕ್ಷ್ಮೀ ತೇಜಸ್ವಿನಿ (ಕಂಚು), ಪ್ರಣೀತ್ (ಕಂಚು) ಲಭಿಸಿದೆ.
ಹಿರಿಯ ಕರಾಟೆ ಶಿಕ್ಷಕ ಹಾಗೂ ನಿರ್ದೇಶಕ ಶಿಹಾನ್ , ವಸಂತ ಕೆ ಬಂಗೇರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.