


ಬೆಳ್ತಂಗಡಿ : ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78 ನೇ ಜಯಂತೋತ್ಸವವು ಜ.22 ರಂದು ಪುತ್ತೂರಿನಲ್ಲಿ ನಡೆಯಿತು.
ಈ ಜಯಂತೋತ್ಸವಕ್ಕೆ ದೇಣಿಗೆಯಾಗಿ ಕೆ.ಗಂಗಾಧರ ಗೌಡ ಮಾಜಿ ಸಚಿವರು ಮತ್ತು ಅಧ್ಯಕ್ಷರು ಪ್ರಸನ್ನ ಶಿಕ್ಷಣ ಸಂಸ್ಥೆ ಇವರು 1,00,000/- ರೂಪಾಯಿ ಮತ್ತು ಬೆಳ್ತಂಗಡಿ ತಾಲೂಕು ಒಕ್ಕಲಿಗ ಸಂಘದಿಂದ ಗ್ರಾಮ ಸಮಿತಿಯಿಂದ 4,60,000/-ರೂಪಾಯಿ ಒಟ್ಟು 5,60,000/- ರೂಪಾಯಿಯನ್ನು ಬೆಳ್ತಂಗಡಿ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಕೇರಿಮಾರು ಇವರು ಬಾಲಗಂಗಾಧರನಾಥ ಜಯಂತೋತ್ಸವ ಸಮಿತಿಯ ಕೋಶಾಧಿಕಾರಿಯಾದ ಉಮೇಶ್ ಇವರಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ಮಂಗಳೂರಿನ ಪೀಠಾಧ್ಯಕ್ಷರಾದ ಶ್ರೀ. ಡಾ. ಧರ್ಮಪಾಲನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ದಿನೇಶ್ ಗೌಡ ಕಲ್ಲಾಜೆ ಮತ್ತು ಬೆಳ್ತಂಗಡಿ ತಾಲೂಕು ಎ. ಪಿ. ಎಂ. ಸಿ ಮಾಜಿ ಅಧ್ಯಕ್ಷರಾದ ಭರತ್ ಗೌಡ ಬಂಗಾಡಿ ಇವರು ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕಿನಿಂದ ಒಕ್ಕಲಿಗ ಸಮುದಾಯದ ವಾಹನ ಜಾಥಾ ಮತ್ತು ಟ್ಯಾಬ್ಲೋ ಮುನ್ನಡೆಸಲಾಯಿತು.