ಕುಕ್ಕೇಡಿ : ಇಲ್ಲಿಯ ಬರ್ಕಜೆ ನವಗುಳಿಗ ಕ್ಷೇತ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷೀಕ ಜಾತ್ರಾ ಮಹೋತ್ಸವವು ಫೆ. 4 – 5ರಂದು ನಡೆಯಲಿದ್ದು ಪೂರ್ವಭಾವಿ ಸಭೆಯು ಜ.14ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷ ಸ್ಥಾನವನ್ನು ಶ್ರೀಮತಿ ಗುಲಾಬಿ ಆದಪ್ಪ ಪೂಜಾರಿ ವಹಿಸಿದ್ದರು. ಧರ್ಮದರ್ಶಿ ರಮೇಶ್ ಬರ್ಕಜೆ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು. ದೇವಸ್ಥಾನದ ಸ್ಥಾಪಕ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾಶಿವ ಹೆಗ್ಡೆ ಮಾತನಾಡಿ ಕ್ಷೇತ್ರ ದಲ್ಲಿ ಪ್ರಶ್ನಾ ಚಿಂತನೆ ನಡೆಸಿ ಜೀರ್ಣೋದ್ಧಾರ ನಡೆದಿತ್ತು, ದೇವಿಯ ಪ್ರೇರಣೆಯಿಂದ ಬ್ರಹ್ಮಾಕಲಶ ನಡೆದಿದ್ದು ಈಗ ಬಹಳಷ್ಟು ಬದಲಾವಣೆಯಾಗಿದೆ. ಕ್ಷೇತ್ರಕ್ಕೆ ಬರುವ ರಸ್ತೆಗಳು ತೀವ್ರ ಕೆಟ್ಟು ಹೋಗಿದ್ದು ಜನ ಪ್ರತಿನಿಧಿಗಳು ಸಹಕಾರ ನೀಡಿದರೆ ಅಭಿವೃದ್ಧಿಯಾಗಲು ಖಂಡಿತಾ ಸಾಧ್ಯ ಎಂದರು.
ಕುಕ್ಕೆಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶೋಕ್ ಪಾನುರು, ವಿಶ್ವನಾಥ್, ಸುಧಾಕರ್, ಬೆಳ್ತಂಗಡಿ ವಸಂತ್, ಉಜಿರೆಯ ಹರೀಶ್ ಶೆಟ್ಟಿ, ಲಕ್ಷ್ಮಣ್ ಹಾಗು ಗ್ರಾಮದ ಅನೇಕ ಹಿರಿಯರು ಹಾಗೂ ಅಧಿಕ ಸಂಖ್ಯೆಯಲ್ಲಿ ಕ್ಷೇತ್ರದ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದರು. ಪುಟ್ಟನ್ನ ಮಲೆಕುಡಿಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.