ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನ ,ರಥಬೀದಿ ಹಾಗೂ ಶ್ರೀ ಶಾರದಾ ಮಂಟಪದ ಮುಂಭಾಗದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರ ಪ್ರದೇಶಾಭಿವೃದ್ಧಿ ನಿಧಿಯನ್ವಯ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಫುಟ್ ಪಾಥ್ ಸಹಿತ ಸಿ.ಸಿ.ಚರಂಡಿ ವ್ಯವಸ್ಥೆಯನ್ನು ಮಕರ ಸಂಕ್ರಮಣ ಶುಭದಿನ ಜ. 14 ರಂದು ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯರು ಉದ್ಘಾಟಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್ .ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರಮೇಲು ,ಶಾರದಾ ಸೇವಾ ಟ್ರಸ್ಟ್ ನ ಭರತ್ ಕುಮಾರ್, ರಾಮಚಂದ್ರ ಶೆಟ್ಟಿ, ಜಯಂತ ಶೆಟ್ಟಿ ಕುಂಟಿನಿ, ಕೇಶವ ಭಟ್ ಅತ್ತಾಜೆ ,ಲಕ್ಷ್ಮಿ ಗ್ರೂಪ್ ನ ಕೆ.ಮೋಹನ ಕುಮಾರ್, ರಾಮದಾಸ್ ಭಂಡಾರ್ಕರ್, ಉಜಿರೆ ಗ್ರಾಮ ಪಂಚಾಯತ್ ಸದಸ್ಯರಾದ ಉಷಾಕಿರಣ್ ಕಾರಂತ್, ಜಯರಾಮ ಗೌಡ, ಕಮಲಾ, ಪ್ರಮೀಳಾ, ಮಂಜುಳಾ ಉಮೇಶ್, ಬಾಲಕೃಷ್ಣ ಗೌಡ, ಮೊದಲಾದವರು ಉಪಸ್ಥಿತರಿದ್ದರು. ಕಾಮಗಾರಿಯ ಗುತ್ತಿಗೆದಾರ ಮಂಜುನಾಥ ಕಾಮತ್ ಅವರನ್ನು ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಮತ್ತು ಶರತ್ ಕೃಷ್ಣ ಪಡುವೆಟ್ನಾಯರು ಶ್ರೀ ಜನಾರ್ದನ ಸ್ವಾಮಿಯ ಸ್ಮರಣಿಕೆ ನೀಡಿ ಗೌರವಿಸಿದರು.