







ಉಜಿರೆ :ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ ಹಾಗೂ ಸಂಸ್ಕೃತ ಸಂಘದ ವತಿಯಿಂದ ವಾಲ್ಮೀಕಿ ಸ್ಮರಣೆ ಕಾರ್ಯಕ್ರಮ ನಡೆಯಿತು. ವಾಲ್ಮೀಕಿ ರಾಮಾಯಣದ ಭರತಾಗಮನದ ಸಂದರ್ಭದ ಕಾವ್ಯಾನುಸಂಧಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಪ್ರಸೀದಾ ರಾವ್ ವಾಚನ ಹಾಗೂ ಧಾರಿಣಿ ಪ್ರವಚನ ಮಾಡಿದರು. ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ನಿರೂಪಿಸಿ ವಂದಿಸಿದರು.








