ಲಾಯಿಲ: ಯುವಕನೊಬ್ಬನ ಶವ ನದಿಯ ಕಿಂಡಿ ಆಣೆಕಟ್ಟಿನ ಬದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಜ.10 ರಂದು ಪತ್ತೆಯಾದ ಘಟನೆ ಲಾಯಿಲದಲ್ಲಿ ನಡೆದಿದೆ.
ಲಾಯಿಲ ಗ್ರಾಮದ ಸೋಮವತಿ ನದಿ ಸಂಗತಿನಗರ ರಸ್ತೆಯ ಬದಿಯಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಲಾಯಿಲ ಗ್ರಾಮದ ಅಯೋಧ್ಯನಗರದ ನಿವಾಸಿ ಅಚ್ಚುತ್ತಾ ಮತ್ತು ರೇವತಿ ದಂಪತಿಯ ಮೂರನೇ ಪುತ್ರ ಕಿರಣ್ ಗಾಣಿಗ (27ವ) ಶವ ಪತ್ತೆಯಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಸಬ್ ಇನ್ಸೆಕ್ಟರ್ ಅರ್ಜುನ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶವವನ್ನು ಶವಪರೀಕ್ಷೆ ಮಾಡಲು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳದಲ್ಲಿ ಲಾಯಿಲ ಗ್ರಾ. ಪಂ. ಉಪಾಧ್ಯಕ್ಷ ಗಣೇಶ್ ,ಸದಸ್ಯರಾದ ಅರವಿಂದ್ ಪೊಲೀಸರಿಗೆ ಸಹಕರಿಸಿದರು.
ಕಿರಣ್ ಸಾವನ್ನಪ್ಪಿರುವ ಕಾರಣವನ್ನು ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
p>