ಅಕ್ರಮ ಮರಳು ದಂಧೆ ಮತ್ತು ಭ್ರಷ್ಟಾಚಾರ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ

0

ಬೆಳ್ತಂಗಡಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಮತ್ತು ಗ್ರಾಮೀಣ ಘಟಕ ಬೆಳ್ತಂಗಡಿ ಇದರ ವತಿಯಿಂದ ಮುಗೇರಡ್ಕದಲ್ಲಿ ನಡೆಯುವ ಅಕ್ರಮ ಮರಳು ದಂದೆ ಮತ್ತು ರೂ. 250 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಮತ್ತು ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಜ. 7 ರಂದು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಿತು.


ಪ್ರತಿಭಟನೆಗೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಮಾಜಿ ಸಚಿವ ಕೆ. ಗಂಗಾಧರ ಗೌಡ ನೇತೃತ್ವ ವಹಿಸಿದ್ದರು.
ಬಿಜೆಪಿ ಸರಕಾರದ 40% ಕಮೀಷನ್ ದಂಧೆ, ಪೆಟ್ರೋಲ್, ಡಿಸೇಲ್ ,ಗ್ಯಾಸ್ ಬೆಲೆ ಏರಿಕೆ, ವಿಮಾನ ನಿಲ್ದಾಣ, ಕಾರ್ಖಾನೆ, ಬ್ಯಾಂಕ್ ,ಎಲ್ ಐ ಸಿ, ಬಂದರುಗಳ ಖಾಸಗೀಕರಣ, ಸರಕಾರ, ಯುವಕರಿಗೆ ಉದ್ಯೋಗ ನೀಡುತ್ತಿಲ್ಲ, ರಸಗೊಬ್ಬರ ಬೆಲೆಏರಿಕೆ ಯಿಂದ ರೈತರು ಕಂಗಾಲಾಗಿದ್ದಾರೆ. ಅನ್ನ ಭಾಗ್ಯ ಯೋಜನೆಯಲ್ಲಿ ಅಕ್ಕಿ ಕಡಿತ ಮಾಡಿ ಬಡವರಿಗೆ ಅನ್ಯಾಯ ಮಾಡಿದ್ದಾರೆ. ಅವಶ್ಯ ದಿನ ಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ದರ ವಿಧಿಸಿದ್ದಾರೆ. ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ, ಜಾತಿ ಧರ್ಮಗಳ ನಡುವೆ ಓಟಿಗಾಗಿ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ, ಇತ್ತೀಚೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ಅಡಿಕೆ ಬೆಳೆಗೆ ಭವಿಷ್ಯ ಇಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಮುಗೇರಡ್ಕ ತನಕ ಜಾಥಾ:
ನಂತರ ಬೆಳ್ತಂಗಡಿ ಮಿನಿ ವಿಧಾನ ಸೌಧದಿಂದ ಮೊಗ್ರು ಗ್ರಾಮದ ಮುಗೇರಡ್ಕ ತನಕ ಪ್ರತಿಭಟನಾ ಜಾಥಾ ನಡೆಯಿತು. ಕರಾಯದಲ್ಲಿ ಪ್ರತಿಭಟನಾ ಸಭೆ ಹಾಗೂ ಮುಗೇರಡ್ಕದಲ್ಲಿ ಅಕ್ರಮ ಮರಳು ದಂಧೆ ಮತ್ತು ನೀರಾವರಿ ಕಾಮಗಾರಿಯ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.


ಪತ್ರಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್, ರಂಜನ್ ಗೌಡ, ನಗರ ಪಂಚಾಯತ್ ಸದಸ್ಯ ಜಗದೀಶ್ ಡಿ., ಪಕ್ಷದ ಮುಖಂಡರುಗಳಾದ ಕೇಶವ ಗೌಡ ಬೆಳಾಲು, ಅಬ್ದುಲ್ ರಹಿಮಾನ್ ಪಡ್ಪು, ಅಶ್ರಪ್ ನೆರಿಯ, ಸಲೀಂ ಗುರುವಾಯನಕೆರೆ, ಗಫೂರ್ ಸಾಹೇಬ್, ಎ.ಸಿ ಮ್ಯಾಥ್ಯೂ, ನಮಿತಾ ಪೂಜಾರಿ,ಶೋಭಾ ನಾರಾಯಣ ಗೌಡ, ಭರತ್ ಕುಮಾರ್ ಇಂದಬೆಟ್ಟು, ರವಿ ಇಂದಬೆಟ್ಟು, ನಾರಾಯಣ ಗೌಡ ಮುಂಡಾಜೆ, ಜನಾದ೯ನ ಕುಲಾಲ್, ಮೆಹಬೂಬ್, ಜೊಯಿ ಜೋಸೆಫ್, ಬಾಲಕೃಷ್ಣ ಗೌಡ ಕೇರಿಮಾರ್ ಹಾಗೂ ಕೆಪಿಸಿಸಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕೆಪಿಸಿಸಿ ಸದಸ್ಯರು (ನಗರ-ಗ್ರಾಮೀಣ) ವಿವಿಧ ಮುಂಚೂಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು (ನಗರ-ಗ್ರಾಮೀಣ) ಹಾಗೂ ಬೆಳ್ತಂಗಡಿ ಬ್ಲಾಕ್-ಕಾಂಗ್ರೆಸ್ ಕಾರ್ಯಕರ್ತ ಬಂಧುಗಳು ಮೊದಲಾದವರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here